ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಲಿ

21 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಆ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪ್ರಾಮಾಣಿಕತೆಯಿಂದ ಆಗಬೇಕಿದೆ. ಇತ್ತೀಚೆಗೆ ಪ್ರತಿಭಾ ಪುರಸ್ಕಾರಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದು ಕೆ.ಇ. ಬೋರ್ಡ್ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಮೋಹನ ಸಿದ್ದಾಂತಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಜಯ ಮತ್ತು ಪ್ರಿಯಾ ಆರ್. ಹೊರಡಿ ಹಾಗೂ ದಿ. ಪ್ರೊ. ಆರ್.ವಿ. ಹೊರಡಿ ದತ್ತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ನಾವು ಕೊಡಿಸಿದ ಶಿಕ್ಷಣದಲ್ಲೇ ಮುಂದುವರೆಯುತ್ತಾರೆ. ಹೀಗಾಗಿ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಇಂದಿನ ಮಕ್ಕಳು ಬಹಳ ಬುದ್ಧಿವಂತರು. ಅವರಿಂದ ನಾವೂ ಕಲಿಯುವುದು ಇದೆ. ಹೊರಡಿ ಒಳ್ಳೆ ವಾಗ್ಮಿಗಳಾಗಿದ್ದರು. ನೇರ ಮತ್ತು ದಿಟ್ಟ ವ್ಯಕ್ತಿ. ಅವರ ಅನೇಕ ಲೇಖನಗಳು ಈಗ ಪ್ರಕಟಗೊಳ್ಳುತ್ತಿವೆ ಎಂದರು.
ಪ್ರೊ. ವಿ.ಸಿ. ಸವಡಿ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕರ್ನಾಟಕ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಕೃತಿಕಾ ಸೂರ್ಯವಂಶಿ ಮತ್ತು ಸಿದ್ದಲಿಂಗೇಶ ಬೆಂಚಿಹಳ್ಳಿ ಅವರಿಗೆ ಸಂಜಯ ಮತ್ತು ಪ್ರಿಯಾ ಹೊರಡಿ ಪ್ರತಿಭಾ ಪುರಸ್ಕಾರ, ಬಿಎ ದ್ವತೀಯ ವರ್ಷದ ರಾಜ್ಯಶಾಸ್ತ್ರ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ಕರ್ನಾಟಕ ಕಲಾ ಕಾಲೇಜಿನ ವಿದ್ಯಾರ್ಥಿಗಳಾದ ಸಂಗಮೇಶ ಪುಠಾಣಿ ಮತ್ತು ಶ್ರೀದೇವಿ ವನಹಳ್ಳಿ ಅವರಿಗೆ ದಿ. ಪ್ರೊ. ಆರ್.ವಿ. ಹೊರಡಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶಶಿಧರ ತೋಡಕರ, ಉಮೇಶ ಮೆಣಸಗಿ, ಎನ್.ಆರ್. ಬಾಳಿಕಾಯಿ, ಶಿವಾನಂದ ಭಾವಿಕಟ್ಟಿ, ವೆಂಕಟೇಶ ಮಾಚಕನೂರ, ಸತೀಶ ತುರಮರಿ, ಮುಕ್ತಾ ಸವದಿ, ಹಂಪಿಹೊಳಿ, ಕೆ.ಎಂ. ಅಂಗಡಿ, ಶಾಂತವೀರ ಬೆಟಗೇರಿ, ಎಂ.ಎಸ್. ಹಂದಿಗೋಳ, ಸಂಜಯ ಶಿರಹಟ್ಟಿ, ಮಹಾಂತೇಶ ನರೇಗಲ್, ಎಸ್.ಕೆ. ಕುಂದರಗಿ, ಇತರರು ಇದ್ದರು.
ಗುರು ಹಿರೇಮಠ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net