

ಯಾದಗಿರಿ: ಇಂದಿನ ಮಕ್ಕಳಿಗೆ ಪಾಲಕರು ಶಿಕ್ಷಣದ ಜತೆ ಕೃಷಿ ಕ್ಷೇತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡುವ ಅಗತ್ಯವಿದೆ ಎಂದು ರೈತ ಮಹಿಳೆ ಕವಿತಾ ಮಿಶ್ರಾ ಸಲಹೆ ನೀಡಿದರು.
ಶನಿವಾರ ಸಂಜೆ ನಗರದ ನವನಂದಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಶಾಲಾ ವಾಷರ್ಿಕೋತ್ಸವ ಹಾಗೂ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಾನು ಕೃಷಿಯಲ್ಲಿ ತೊಡಗಿಕೊಂಡು ಕಡಿಮೆ ನೀರಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದಿರುವುದನ್ನ ನೋಡಿ ನೂರಾರು ರೈತರು ಕೃಷಿಯತ್ತ ವಾಲುವಂತೆ ಮಾಡಿರುವುದೇ ನನ್ನ ಜೀವನದ ಸಾಧನೆಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೆಂಕಟರಡ್ಡಿ ಮುದ್ನಾಳ್, ಸಕರ್ಾರದ ಜತೆಗೆ ಖಾಸಗಿ ಶಾಲೆಗಳು ಇಂದು ಶೈಕ್ಷಣಿಕ ಕ್ಷೇತ್ರ ಸುಧಾರಣೆಗೆ ಹೆಚ್ಚು ಒತ್ತು ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ. ನವನಂದಿ ಶಾಲೆ ಕಳೆದ ಒಂದು ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು.
ಸಾನಿದ್ಯ ಹೆಡಗಿಮದ್ರಾದ ಶ್ರೀ ಶಾಂತ ಮಲ್ಲಿಕಾಜರ್ುನ ಪಂಡಿತಾರಾಧ್ಯ ಶಿವಾಚಾರ್ಯರು, ಮಕ್ಕಳಿಗೆ ಶಿಕ್ಷಣ ಜತೆ ಸಂಸ್ಕಾರ ನೀಡುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ. ಇಂದು ಶಿಕ್ಷಣ ಸಂಸ್ಥೆ ಆರಂಭಿಸುವುದು ಸುಲಭ. ಆದರೆ ಆದರೆ ಅದನ್ನು ನಡೆಸಿಕೊಂಡು ಹೋಗುವುದು ಅಷ್ಟೇ ಕಷ್ಟ ಎಂದರು.
ಪ್ರಸ್ತಾವಿಕ ಮಾತನಾಡಿದ ಸಂಸ್ಥೆ ಅದ್ಯಕ್ಷ ಬಸವರಾಜ ಶಿವರಾಯ, ನಮ್ಮ ಸಂಸ್ಥೆ ಶಿಕ್ಷಣದ ಜತೆಯಲ್ಲಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಯೊಡಗಿಕೊಂಡಿದೆ. ಕರೊನಾ ಕಾಲಘಟ್ಟದಲ್ಲಿ ಒಂದುವರೆ ತಿಂಗಳು ಅನ್ನ ಅಲೆಮಾರಿ ಹಾಗೂ ವಲಸೆ ಕಾಮರ್ಿಕರಿಗೆ ಉಚಿತ ಅನ್ನಸಂತರ್ಪಣೆ ಮಾಡಲಾಗಿತ್ತು ಎಂದು ವಿವರಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶರಣಗೌಡ ಬಾಡಿಯಾಳ, ಯುಡಾ ಅದ್ಯಕ್ಷ ರುದ್ರಗೌಡ, ಡಾ.ಸುನೀಲ್ ಪಾಟೀಲ್, ಡಾ.ವೀರಭದ್ರಪ್ಪ ಯಲ್ಹೇರಿ, ಸುರೇಶ ಬಾಬು ಗುಂಟಪಲ್ಲಿ, ಸುನಂದಾ, ಡಾ.ನೀಲಮ್ಮಎಸ್.ರಡ್ಡಿ, ಡಾ.ಶರಣಬಸಪ್ಪ ಶಿವರಾಯ, ಮುಖ್ಯಗುರು ರೇವಣಸಿದ್ದಪ್ಪ ಮಲಕೋಡ ಇದ್ದರು.
ಇದೇ ವೇಳೆ 21 ಜನ ಸಾಧಕರ ರೈತರನ್ನು ಸನ್ಮಾನಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.