

ಕಿಕ್ಕೇರಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯೆ ವರದಾನವಾಗಿದ್ದು, ಶಿಕ್ಷಣ ಹಕ್ಕಾಗಬೇಕು ಎಂದು ಬೆಂಗಳೂರಿನ ರಾಜಲಾಂಛನ ಸಂಸ್ಥೆ ಕಾರ್ಯದರ್ಶಿ ಹೊನ್ನೇನಹಳ್ಳಿ ಎಚ್.ಎ. ಶೇಖರ್ ಅಭಿಪ್ರಾಯಪಟ್ಟರು.
ಸಮೀಪದ ಆಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ರಾಜಲಾಂಛನ ಸಂಸ್ಥೆ ಯುಕ್ತಿ ಸಂಸ್ಥಾನದ ಸಂಸ್ಥಾಪಕ ಎಲ್.ವೈ.ರಾಜೇಶ್ ಮಾರ್ಗದರ್ಶನದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕೆ ಓದಿ, ಜ್ಞಾನ ವೃದ್ಧಿಸಿಕೊಳ್ಳಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್‌ಬುಕ್, ಲೇಖನಿ, ಪರೀಕ್ಷೆ ಪ್ಯಾಡ್ ಮತ್ತಿತರ ವಸ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಶಿಕ್ಷಣದೊಂದಿಗೆ ಮಕ್ಕಳಿಗೆ ಪರಿಸರದ ಅರಿವು ಮೂಡಿಸಬೇಕಿದೆ ಎಂದರು.
ಮುಖ್ಯಶಿಕ್ಷಕಿ ನಾಗರತ್ನಾ ಮಾತನಾಡಿದರು. ಸಂಸ್ಥೆ ಸದಸ್ಯರಾದ ಎಚ್.ಜಿ.ಶ್ರೀನಿವಾಸ್, ಹಡವಪ್ಪ, ಎಚ್.ಎನ್.ಮಂಜೇಗೌಡ, ನವೀನಕುಮಾರ್, ಶಿವೇಗೌಡ, ದೇವರಾಜು, ಸುರೇಶ್, ಗಿಡ್ಡೇಗೌಡ, ಶ್ರೀಧರ್, ಪರಮೇಶಾಚಾರ್, ಪ್ರದೀಪ್, ಸತೀಶ್, ಮುಖ್ಯಶಿಕ್ಷಕಿ ಮತ್ತಿತರರಿದ್ದರು.