ಮಕ್ಕಳಿಗೆ ನೈತಿಕ ಮೌಲ್ಯ ಕಲಿಸಿ

kls prathbha
ಹಿರೇಬೈಲು ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮೂಡಿಗೆರೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ರಾಮದಾಸ್ ಉದ್ಘಾಟಿಸಿದರು. ಫಾದರ್ ಡೇವಿಡ್, ಅಬ್ಬಾಸ್ ಅಲ್ ಹಾಜರಿ, ಸಿಸ್ಟರ್ ಫ್ಲೋರಿನ್ ಮಿನೇಜಸ್ ಇತರರಿದ್ದರು.
Published on

ಕಳಸ: ಮಕ್ಕಳಿಗೆ ತಂದೆ, ತಾಯಿ ಎಲ್ಲ ಸೌಲಭ್ಯ ಕೊಡುತ್ತಾರೆ. ಆದರೆ ನೈತಿಕ ಮೌಲ್ಯ ಕಲಿಸಿ ಕೊಡುವುದರಲ್ಲಿ ಎಡವುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮದಾಸ್ ಗೌಡ ಹೇಳಿದರು.

ಹಿರೇಬೈಲು ಸೆೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಮೂಡಿಗೆರೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳು ಸಂಸ್ಕಾರಯುತವಾಗಿ ಬೆಳೆಯಬೇಕು. ಅದರಲ್ಲಿ ತಾಯಿಯ ಪಾತ್ರ ಬಹಳ ಮುಖ್ಯ ಎಂದರು.

ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಮಾತನಾಡಿ, ಮಕ್ಕಳು ಪ್ರತಿಭೆಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ವೇದಿಕೆ ಕಲ್ಪಿಸಿಕೊಡಲಾಗಿದೆ. ಸರ್ಕಾರ ಇಂಥ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಹಿರೇಬೈಲು ಚರ್ಚ್ ಫಾದರ್ ಡೇವಿಡ್ ಪ್ರಕಾಶ್ ಮಾತನಾಡಿ, ಪ್ರತಿಭೆ ದೇವರ ವರದಾನ ಎಂದರು.

ಹಿರೇಬೈಲು ಬದ್ರಿಯಾ ಜುಮ್ಮಾ ಮಸೀದಿ ಧರ್ಮಗುರು ಅಬ್ಬಾಸ್ ಅಲ್ ಹಾಜರಿ, ಕಾಫಿ ಬೆಳೆಗಾರ ಕೆ.ಎ.ಶ್ರೇಣಿಕ್, ಸೆಕ್ರೇಡ್ ಹಾರ್ಟ್ ಹಿರೇಬೈಲು ಶಾಲೆ ಸಂಚಾಲಕಿ ಸಿಸ್ಟರ್ ಫ್ಲೋರಿನ್ ಮಿನೇಜಸ್, ಶಾಲೆ ಮುಖ್ಯಸ್ಥೆ ಸಿಸ್ಟರ್ ಹೆಲೆನ್ ಸಿಕ್ವೇರಾ, ಬಿಇಒ ಮೀನಾಕ್ಷಿ , ಹೇಮಾವತಿ, ರವೀಂದ್ರ, ಆದಮ್, ಸ್ಮಿತಾ ಲೋಬೊ, ಸವಿತಾ, ಒಲಿವಿಯ ಮಿರಾಂದ, ಲವೀನಾ ರೇಗೊ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net