ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ

11-100
ಹಳ್ಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕಲಿಕಾ ಚೇತರಿಕೆ ಹಬ್ಬವನ್ನು ಬಿಇಒ ಅಜೀತ ಮನ್ನಿಕೇರಿ ಉದ್ಘಾಟಿಸಿದರು. ಸಿದ್ರಾಮ ಲೋಕನ್ನವರ, ರೇಣುಕಾ ಆನಿ ಇತರರು ಇದ್ದರು.
Published on

ಮೂಡಲಗಿ: ಸದ್ಯ ಶಿಕ್ಷಣದಲ್ಲಿ ಕಲಿಕಾ ಹಬ್ಬ ಯೋಜನೆ ರೂಪಿಸುವ ಮೂಲಕ ಮಕ್ಕಳ ಕಲಿಕೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಾರ್ಯ ಕೈಗೊಂಡಿದೆ ಎಂದು ಬಿಇಒ ಅಜೀತ ಮನ್ನಿಕೇರಿ ಹೇಳಿದರು.
ತಾಲೂಕಿನ ಹಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಕಲಿಕಾ ಚೇತರಿಕೆ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದ ಮೂಲಕ ವಿವಿಧ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿದ್ದೇವೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮ ಲೋಕನ್ನವರ ಮಾತನಾಡಿದರು. ಹಳ್ಳೂರ ಸಮೂಹ ವ್ಯಾಪ್ತಿಯ ಶಿಕ್ಷಕರು ವಿದ್ಯಾರ್ಥಿಗಳು ಕಲಿಕಾ ಚೇತರಿಕೆ ಹಬ್ಬದಲ್ಲಿ ಭಾಗವಹಿಸುವ ಮೂಲಕ ಕಲಿಕೆಯ ಲಾಭ ಪಡೆದುಕೊಂಡರು.ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಆನಿ, ಮಹದೇವ ಕುಲಕರ್ಣಿ, ಸಾಮಾಜಿಕ ಕಾರ್ಯಕರ್ತ ಸಿದ್ದಣ್ಣ ದುರದುಂಡಿ, ದುಂಡಪ್ಪ ಕತ್ತಿ, ಪಿ.ಬಿ. ಕುಲಕರ್ಣಿ, ಶಿವಾನಂದ ಕುರನಗಿ, ಸುರೇಶ ತಳವಾರ, ಎಸ್.ಎಚ್. ವಾಸನ, ಬಿ.ಎಚ್. ನಿಡೋಣಿ, ಸಿಆರ್‌ಪಿ ಬಸವರಾಜ ಪಾಟೀಲ, ಪ್ರಕಾಶ ಮೋರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net