ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಿ

shankar rathod chincholi tp EO
ಶಂಕರ ರಾಠೋಡ್ ತಾಪಂ ಇಒ
Published on

ಚಿಂಚೋಳಿ: ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಇತರ ಸೌಕರ್ಯ ನೀಡಲು ಸರ್ಕಾರ ಅನುದಾನ ಒದಗಿಸುತ್ತಿದೆ ಹೊರತು, ದುರ್ಬಳಕೆ ಮಾಡಿಕೊಳ್ಳಲು ಅಲ್ಲ. ಮಾರ್ಗಸೂಚಿಯಂತೆ ಮಕ್ಕಳಿಗೆ ಸವಲತ್ತು ನೀಡುವಲ್ಲಿ ನಿರ್ಲಕ್ಷ್ಯ ತೋರಿದರೆ ಸಹಿಸಲ್ಲ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಂಕರ ರಾಠೋಡ್ ಎಚ್ಚರಿಸಿದರು.

ನಿಡಗುಂದಾ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಅವ್ಯವಸ್ಥೆ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ವಸತಿನಿಲಯ ಮೇಲ್ಚಿಚಾಕರು, ಅಡುಗೆ ಸಹಾಯಕರನ್ನು ತರಾಟೆಗೆ ತೆಗೆದುಕೊಂಡರು.

ಭೋಜನಾಲಯ ಕೋಣೆಗೆ ತೆರಳಿ ಅಡುಗೆ ಗುಣಮಟ್ಟ ಪರೀಕ್ಷಿಸಿ ಮೆನು ಪ್ರಕಾರ ಊಟ ಬಡಿಸದಿರುವುದು, ಕೇವಲ ಆಲುಗಡ್ಡೆ ಸಾಂಬಾರ್ ಮಾಡಿದ್ದು, ತರಕಾರಿ ಬಳಸದಿರುವುದು, ಕುಡಿವ ನೀರಿನ ಅವ್ಯವಸ್ಥೆ, ಅನ್ನ ಸರಿಯಾಗಿ ಬೇಯಿಸದ್ದನ್ನು ನೋಡಿ ಒಂದು ವಾರದಲ್ಲಿ ವ್ಯವಸ್ಥೆ ಸರಿಪಡಿಸಿಕೊಳ್ಳದಿದ್ದರೆ ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ಎಚ್ಚರಿಕೆ ನೀಡಿದರು.

ಸರ್ಕಾರ ವಸತಿ ಶಾಲೆಯ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಕಷ್ಟು ಸೌಕರ್ಯ ಕಲ್ಪಿಸುತ್ತಿದೆ. ಮೇಲ್ವಿಚಾರಕ, ಅಡುಗೆ ಸಹಾಯಕರು ನಿರ್ಲಕ್ಷ ವಹಿಸುವುದು ಸರಿಯಲ್ಲ. ಅವ್ಯವಸ್ಥೆ ಕಂಡು ಬಂದರೆ ಮನೆಗೆ ಹೋಗಬೇಕಾಗುತ್ತದೆ. ಮಕ್ಕಳನ್ನು ವಂಚಿಸದೆ ಕಾರ್ಯನಿರ್ವಹಿಸಬೇಕು.
| ಶಂಕರ ರಾಠೋಡ್ ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net