ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ

22ydg 03
Published on

ಯಾದಗಿರಿ: ಮಕ್ಕಳಿಗೆ ಕಾಡುತ್ತಿರುವ ಅಪೌಷ್ಟಿಕ ಸಮಸ್ಯೆ ನಿವಾರಣೆ ಹಾಗೂ ಸೃಜನಾತ್ಮಕ ಚಟುವಟಿಕೆ ಹೆಚ್ಚಿಸಲು ಸರಕಾರ ಸಾಕಷ್ಟು ಪ್ರಯತ್ನಿಸುತ್ತಿದ್ದು, ಅವರಿಗೆ ನೀಡುವ ಆಹಾರ ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಸೂಚನೆ ನೀಡಿದರು.

ಮಂಗಳವಾರ ತಾಲೂಕಿನ ಮುಷ್ಠೂರು ಗ್ರಾಮದಲ್ಲಿ ಆಯೋಜಿಸಿದ್ದ ಶಾಸಕರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ನಂತರ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಅವರು, ಅಲ್ಲಿನ ದಾಸ್ತಾನು ಕೋಣೆ ಹಾಗೂ ಹಾಜರಿ ಪುಸ್ತಕ ಪರಿಶೀಲಿಸಿದರು. ಗ್ರಾಮೀಣ ಮಕ್ಕಳಿಗೆ ಕಾಡುತ್ತಿರುವ ಅಪೌಷ್ಟಿಕ ಸಮಸ್ಯೆ ದೂರ ಮಾಡಲು ಸಕರ್ಾರ ಗುಣಮಟ್ಟದ ಆಹಾರ ಕೊಡುತ್ತಿದೆ. ಅಲ್ಲದೆ, ಕೇಂದ್ರದಲ್ಲಿ ದಾಖಲಾದ ಮಕ್ಕಳ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಲು ರಚನಾತ್ಮಕ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಳೆಯುವ ಮಕ್ಕಳ ಆರೋಗ್ಯ ಸೂಕ್ಷ್ಮವಾಗಿರುತ್ತದೆ. ಹೀಗಾಗಿ, ಶುದ್ಧ ಕುಡಿಯುವ, ಬಹು ಪೊಷಕಾಂಶಯುಕ್ತ ಆಹಾರ, ಶೌಚಗೃಹ ಸೇರಿ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಬೇಕು. ಮಕ್ಕಳಿಗೆ ಆಟ ಆಡಿಸುವ ಮೂಲಕ ಪಾಠ ಮಾಡಿ ಕಲಿಸಬೇಕು. ಅವರ ಕಲಿಕೆ ಸರಳವಾಗಿರಲಿ, ಕಲಿಕೆಗೆ ಅಗತ್ಯವಾದ ಚಿತ್ರಪಟ ಹಾಗೂ ಆಟಿಕೆ ಸಾಮಾನುಗಳ ಕೊರತೆಯಾಗದಿರಲಿ ಎಂದ ಅವರು, ನಿಮ್ಮ ಸಮಸ್ಯೆಗಳು ಏನಿದ್ದರೂ ತಿಳಿಸಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net