ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಅಗತ್ಯ

16 Shapur 01
ಶಹಾಪುರದಲ್ಲಿ ಬುಧವಾರ ಹಮ್ಮಿಕೊಂಡ ಕರ‍್ಯಕ್ರಮದಲ್ಲಿ ಪ್ರಾಚಾರ್ಯ ವೈ. ಎಚ್.ವಜ್ಜಲ್ ಮಕ್ಕಳಿಗೆ ಉಚಿತ ಕಂಪ್ಯೂಟರ್ ಮತ್ತು ಪ್ರಮಾಣ ಪತ್ರ ವಿತರಿಸಿದರು. ಡಾ.ಸತೀಶರಡ್ಡಿ ತುಳೇರ, ಸೈಯದ್ ಚಾಂದ್‌ಪಾಷಾ, ದೇವಿಂದ್ರಪ್ಪ ಆಲ್ದಾಳ, ದೇವರಾಜ ನಾಯಕ, ಐಶ್ವರ್ಯ ಕಟ್ಟಿಮನಿ ಇತರರಿದ್ದರು.
Published on

ಶಹಾಪುರ: ಆಧುನಿಕ ತಂತ್ರಜ್ಞಾನದ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ತುಂಬಾ ಅಗತ್ಯವಾಗಿದೆ ಎಂದು ಸರ್ಕಾರಿ ಕನ್ಯಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವೈ.ಎಚ್.ವಜ್ಜಲ್ ಹೇಳಿದರು.

ನಗರದಲ್ಲಿ ಬಲಭೀಮೇಶ್ವರ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮಾಲ್ಗುಡಿ ಕಂಪ್ಯೂಟರ್ ತರಬೇತಿ ಕೇಂದ್ರ ಬುಧವಾರ ಹಮ್ಮಿಕೊಂಡ ಗುರುವಂದನಾ, ಉಚಿತ ಕಂಪ್ಯೂಟರ್ ಹಾಗೂ ಪ್ರಮಾಣಪತ್ರ ವಿತರಣೆ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ, ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಎಲ್ಲ ಇಲಾಖೆಗಳ ಉದ್ಯೋಗಗಳಿಗೆ ನಡೆಸುವ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಂಪ್ಯೂಟರ್ ಜ್ಞಾನಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಡಲಾಗಿದೆ ಹೀಗಾಗಿ ಮಕ್ಕಳು ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಬೇಕು. ಪಾಲಕರು ಕೂಡ ಮಕ್ಕಳ ಈ ಜ್ಞಾನಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಇತಿಹಾಸ ಉಪನ್ಯಾಸಕ ಭೀಮರಾಯ ದೊರೆ ಮಾತನಾಡಿ, ಪರಿವರ್ತನಾಶೀಲ ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಕಂಪ್ಯೂಟರ್ ಜ್ಞಾನ, ಕೌಶಲಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಆಂಗ್ಲ ಭಾಷಾ ಜ್ಞಾನ ವಿಸ್ತರಿಸಿಕೊಳ್ಳಬೇಕು. ಇದರಿಂದ ಉದ್ಯೋಗವನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.

ಅರ್ಥಶಾಸ್ತç ಉಪನ್ಯಾಸಕ ಡಾ. ಸತೀಶರಡ್ಡಿ ತುಳೇರ, ಕನ್ನಡ ಉಪನ್ಯಾಸಕರಾದ ಸೈಯದ್ ಚಾಂದ್‌ಪಾಷಾ, ದೇವಿಂದ್ರಪ್ಪ ಆಲ್ದಾಳ, ಸಮಾಜಶಾಸ್ತç ಉಪನ್ಯಾಸಕ ದೇವರಾಜ ನಾಯಕ ಅವರು ಗುರು-ಶಿಷ್ಯರ ಪವಿತ್ರ ಸಂಬAಧದ ಮಹತ್ವ ಕುರಿತು ಮಾತನಾಡಿದರು.

ಸಂಸ್ಥೆ ಅಧ್ಯಕ್ಷೆ ಐಶ್ವರ್ಯ ಕಟ್ಟಿಮನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಕೇಂದ್ರದ ಮುಖ್ಯಸ್ಥ ವಿಶ್ವನಾಥ ಉಪಸ್ಥಿತರಿದ್ದರು. ಈ ವೇಳೆ ರಾಜ್ಯಮಟ್ಟದ ಚೆಸ್ ಕ್ರೀಡಾಪಟು ಅಭಿರುಚಿ ಡಿ. ಆಲ್ದಾಳ ಅವರಿಗೆ ಸನ್ಮಾನಿಸಲಾಯಿತು.

ಈ ವೇಳೆ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಜಟ್ಟೆಪ್ಪ, ಅಕ್ಷತಾ, ಲಾಲಮುನಿ, ಸಾನಿಯಾ ಬೇಗಂ, ಶಿಲ್ಪಾ, ಅಂಜನಾ, ಅಂಜುಮ್‌ಅವರು ಅನಿಸಿಕೆ ವ್ಯಕ್ತಪಡಿಸಿದರು. ದ್ರಾಕ್ಷಾಯಿಣಿ ಮತ್ತು ಭಾಗ್ಯಶ್ರೀ ನಿರೂಪಿಸಿದರು. ನಾಗಮ್ಮ ಪ್ರಾರ್ಥಿಸಿದರು. ಮಲ್ಲಪ್ಪ ಹುಲ್ಲೂರು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net