

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವ ವಿದ್ಯಾಲಯ ಬಳಿಯ ಸಾಧುನವರ ಎಸ್ಟೇಟ್‌ನ ಶ್ರೀ ಸಾಯಿ ಗಾರ್ಡನ್‌ನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸುಬ್ರಮಣ್ಣೇಶ್ವರ ಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮತ್ತು ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಐದು ದಿನಗಳ ಕಾಲ ಏರ್ಪಡಿಸಿದ್ದ ಅಡವಿಸಿದ್ದೇಶ್ವರ ಮಠದ ಶ್ರೀ ಅಡಿವೇಶ ದೇವರ ಪ್ರವಚನ ಮಂಗಲೋತ್ಸವ ಭಾನುವಾರ ಜರುಗಿತು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬೈಲಹೊಂಗಲ ಮೂರುಸಾವಿರ ಮಠದ ಶ್ರೀ ನೀಲಕಂಠ ಸ್ವಾಮೀಜಿ ಆಶೀರ್ವಚನ ನೀಡಿ, ಬಸವಣ್ಣನವರ ವಚನಗಳು ನಮ್ಮೆಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಬೇಕು. ಬದುಕು ಸುಂದರವಾಗಿರಲು ಪರೋಪಕಾರ ಬುದ್ಧಿಯೊಂದಿಗೆ ಧರ್ಮದ ಹಾದಿಯಲ್ಲಿ ಸಾಗಬೇಕು. ತಾಯಂದಿರು ಮಕ್ಕಳಿಗೆ ಒಳ್ಳೆ ಸಂಸ್ಕಾರ ಕೊಟ್ಟು ಬೆಳೆಸಿದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಂತೆ ಎಂದರು.
ರಾಣಿ ಚನ್ನಮ್ಮ ಮಹಿಳಾ ಸಂಘದ ವತಿಯಿಂದ ಶ್ರೀಗಳಿಗೆ ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ, ವೀರನಗೌಡ ಪಾಟೀಲ, ಶಿವಕುಮಾರ ಮಠದ, ಅನ್ನದಾನಿ ಚೌಕಿಮಠ, ಗುರುನಾಥ ಮುತ್ತಗಿ, ಗುರುರಾಜ ತುರಮರಿ,ಸ್ವಪ್ನಿಲ್ ಸಾಬಳೆ, ನಿಜನಗೌಡ ಪಾಟೀಲ, ಜಿ.ಡಿ. ಹಿರೇಮಠ, ಬಾಳನಗೌಡ ಪಾಟೀಲ, ವಿಜಯ ತಿವಾರಿ, ರವೀಂದ್ರ ಕಮ್ಮಾರ, ಮಹಿಳಾ ಸಂಘದ ಅಧ್ಯಕ್ಷೆ ಸಂಗಮೇಶ್ವರಿ ಮಠದ, ಪಾರ್ವತಿ ಮೂಲಿಮನಿ, ಪಾರ್ವತಿ ಚೌಕಿಮಠ, ನೀತಾ ಹಿರೇಮಠ, ಮಹಾದೇವಿ ಮುತ್ತಗಿ, ಜಯಲಕ್ಷ್ಮಿ ಧೋತ್ರದ, ಯಶೋಧಾ ಪಾಟೀಲ, ಸುಮನಾ ಮಲ್ಲನಗೌಡರ, ಸಂಗೀತಾ ಸುತಾರ, ವಿಶ್ವನಾಥ ಜವಳಿ, ಇತರರು ಇದ್ದರು.