ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

Treat children well
ನಾಲತವಾಡ ಪಟ್ಟಣದ ಶಂಕರರಾವ್ ನಾಡಗೌಡ ನಗರದಲ್ಲಿ ಅಭಿಮಾನಿಗಳಿಂದ ಬಲದಿನ್ನಿ ಧಣಿ ದಿ. ಶಂಕರರಾವ್ ನಾಡಗೌಡ ಅವರು 19ನೇ ಪುಣ್ಯಸ್ಮರಣೋತ್ಸವ ಆಚರಿಸಲಾಯಿತು. ತಾ.ಪಂ. ಮಾಜಿ ಉಪಾಧ್ಯಕ್ಷ ನಜೀರಹ್ಮದ ಕೊಣ್ಣೂರ, ಬಸವರಾಜ ಡೇರೆದ, ಎಂಎಜಿ ಮಹಾಂತೇಶ ಗಂಗನಗೌಡ್ರ, ಬಾಬು ಹಮಾತಿಗೌಡ್ರ, ಅಬ್ದುಲಗನಿಸಾಬ ಖಾಜಿ, ಬಸವರಾಜ ಯಾಳಗಿ, ಈಶ್ವರ ಡಿಗ್ಗಿ, ಸಂಗಣ್ಣ ಕುಳಗೇರಿ, ಬಾಲಚಂದ್ರ ಗದಗಿನ ಇತರರಿದ್ದರು.
Published on

ನಾಲತವಾಡ: ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕೊಟ್ಟು ಸನ್ಮಾರ್ಗದಲ್ಲಿ ಮುನ್ನಡೆಸುವ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸಹಕರಿಸಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.

ಪಟ್ಟಣದ ಬಸವೇಶ್ವರ ಪ್ರೌಢಶಾಲೆ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಿ. ಶಂಕರರಾವ್ ನಾಡಗೌಡ 19ನೇ ಪುಣ್ಯಸ್ಮರಣೆ, ನಾನಾ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಮಕ್ಕಳ ಓದಿನ ಆಸಕ್ತಿ ಹೆಚ್ಚಿಸಲು ಗ್ರಂಥಾಲಯ ಆರಂಭಿಸಲಾಗುವುದು ಎಂದರು.

ನಿವೃತ್ತ ಶಿಕ್ಷಕ ಜಿ.ಎಸ್. ಪಾಟೀಲ ಮಾತನಾಡಿ, ದಾನ ಮಾಡಿದ್ದರೂ ಮಾಡಂದಂತಿರುವ ದಿ. ಬಲದಿನ್ನಿ ನಾಡಗೌಡರ ವ್ಯಕ್ತಿತ್ವ ಶ್ಲಾಘನೀಯವಾಗಿತ್ತು. ಶಿಕ್ಷಕ ಮಗುವಿನ ಬೌದ್ಧಿಕಮಟ್ಟಕ್ಕೆ ಅನುಗುಣವಾಗಿ ಶಿಕ್ಷಣ ಕೊಡಬೇಕು ಎಂದರು.

ಕಾರ್ಯದರ್ಶಿ ಡಾ. ಬಲವಂತ ಉಣ್ಣಿಬಾವಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ, ರಂಗೋಲಿ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಹಾಗೂ ಬಹುಮಾನ ವಿತರಿಸಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಬಿ. ನ್ಯಾಮಣ್ಣ ಅವರನ್ನು ಶಾಸಕರು ಸನ್ಮಾನಿಸಿದರು. ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು.

ಬಾಪುರಾವ್ ನಾಡಗೌಡ, ಬಾಲಾಜಿ ಸಕ್ಕರೆ ಕಾರ್ಖಾನೆ ವೆಂಕಟೇಶಗೌಡ ಪಾಟೀಲ, ಉದ್ಯಮಿ ಸಿ.ಬಿ. ಅಸ್ಕಿ, ಚಿನ್ನು ನಾಡಗೌಡ, ರಾಜು ಕಲಬುರ್ಗಿ, ಸಿ.ಪಿ. ಸಜ್ಜನ, ಶಿವಪ್ಪಗೌಡ ತಾತರಡ್ಡಿ, ಪವಾಡೆಪ್ಪ ಹವಾಲ್ದಾರ, ಸಿಒ ಅನಿಲಕುಮಾರ ಕುಲಕರ್ಣಿ, ಹನಮಂತ ಕುರಿ, ಶಿಕ್ಷಕ ಆಲೂರ, ಎಂಎಜಿ ಗಂಗನಗೌಡ್ರ, ಶೇಖು ಮೇಟಿ, ಸಿಪಿಐ ಮಲ್ಲಿಕಾರ್ಜುನ ತುಳಿಗೇರಿ, ಗುರು ತಾರನಾಳ, ಪ್ರಭು ಡೇರೇದ, ಟಿಎಚ್‌ಓ ಡಾ. ಸತೀಶ ತಿವಾರಿ, ಗನಿಸಾಬ ಖಾಜಿ, ರಾಯನಗೌಡ ತಾತರಡ್ಡಿ ಇತರರಿದ್ದರು. ಬಿ.ಕೆ. ರುದ್ರಗಂಟಿ ನಿರೂಪಿಸಿದರು, ಡಾ. ಬಲವಂತ ಉಣ್ಣಿಬಾವಿ ಸ್ವಾಗತಿಸಿದರು. ಶಿಕ್ಷಕ ನಾಯಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net