ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ

12spt1
Published on

ಸೋಮವಾರಪೇಟೆ: ಶಿಸ್ತು, ಸಂಯಮ, ಸಮಯಪಾಲನೆ, ಕಲಿಕಾ ಆಸಕ್ತಿಯಿರುವ ಮಕ್ಕಳು ಜೀವನದಲ್ಲಿ ಸಾಧನೆ ಮಾಡುವುದರೊಂದಿಗೆ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಮಡಿಕೇರಿ ಆಕಾಶವಾಣಿ ನಿರ್ದೇಶಕ ಡಾ.ವಿಜಯ್ ಅಂಗಡಿ ಅಭಿಪ್ರಾಯಪಟ್ಟರು.


ಚೌಡ್ಲು ವಿಶ್ವಮಾನವ ಕುವೆಂಪು ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಹುಡುಕಿ ಪ್ರೋತ್ಸಾಹ ನೀಡಬೇಕಿರುವುದು ಪಾಲಕರು, ಶಿಕ್ಷಕರು. ದುರಾಸೆಗಾಗಿ ಹಣವನ್ನು ಖರ್ಚು ಮಾಡಿದರೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಿಲ್ಲ. ವಿದ್ಯೆ ಕಲಿಸಲು ವ್ಯಯಿಸುವ ಹಣ ಇಡೀ ಕುಟುಂಬವನ್ನು ಉತ್ತುಂಗಕ್ಕೆ ತಲುಪಿಸುತ್ತದೆ ಎಂದರು.


ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಕುವೆಂಪು ವಿದ್ಯಾ ಸಂಸ್ಥೆಯ ಭಾತ್ಮೀದಾರ ಕೆ.ಎಂ.ಜಗದೀಶ್, ಕಾರ್ಯದರ್ಶಿ ಎನ್.ಬಿ.ಗಣಪತಿ, ಖಜಾಂಚಿ ಜಿ.ಪಿ.ಲಿಂಗರಾಜು, ಪದಾಧಿಕಾರಿಗಳಾದ ಎಸ್.ಜಿ.ಮೇದಪ್ಪ, ಕೆ.ಟಿ.ಪರಮೇಶ್, ನಂದಕುಮಾರ್, ಮಾದಪ್ಪ, ನಿರ್ಮಲಾ ಪ್ರಕಾಶ್, ಜಲಾ ಹೂವಯ್ಯ, ಎಸ್.ಬಿ.ಭರತ್‌ಕುಮಾರ್, ಕೆ.ಕೆ.ಮಂಜುನಾಥ್ ಕುಮಾರ್, ಡಿ.ಎಸ್.ಚಂಗಪ್ಪ, ಪಿ.ಕೆ.ರವಿ, ಮುಖ್ಯ ಶಿಕ್ಷಕ ಮಿಲ್‌ಡ್ರೆಡ್ ಗೋನ್ಸಾಲ್ವೆಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net