ಮಕ್ಕಳಿಗೆ ಉತ್ತಮ ನೀಡಿ

Oplus_16777216
Oplus_16777216
Published on

ಬಾಗಲಕೋಟೆ: ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೇ ಸಮಾಜ ಅತ್ಯುನ್ನತ ಸ್ಥಾನದಲ್ಲಿ ಬೆಳಯಬಲ್ಲದು ಎಂದು ಅಂಬಿಗರ ಸಮಾಜದ ನೌಕರರ ಸಂಘದ ಜಿಲ್ಲಾಧ್ಯಕ್ಷ ಉದಯ ಅಂಬಿಗೇರ ಹೇಳಿದರು.

ನವನಗರದ ಸೆಕ್ಟರ ನಂಬರ ೮ ರಲ್ಲಿರುವ ಅಂಬಿಗ ಚೌಡಯ್ಯ ಭವನದಲ್ಲಿ ಬಾಗಲಕೋಟೆ ತಾಲೂಕಾ ಅಂಬಿಗ ಸಮಾಜದ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಬಿಗ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಮುಂದುವರೆದವರು ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯಮಾಡಬೇಕು. ಇದರಿಂದ ಮಕ್ಕಳಲ್ಲಿ ಹುಮ್ಮಸ್ಸು ಉತ್ಸಾಹ ತುಂಬುವ ಕೆಲಸ ಮಾಡಿದರೆ, ಮಕ್ಕಳಲ್ಲಿರುವ ಪ್ರತಿಭೆ ಹೊರತರಬಹುದು ಎಂದರು.

ರೈಲ್ವೆ ಪಿಎಸ್‌ಐ ಸಿz್ದÁರ್ಥ ಬಾರ್ಕಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಸಾಧನೆ ಮಾಡಬೇಕಿದ್ದರೆ ಅವರನ್ನು ಹುರಿದುಂಬಿಸುವ ಕಾರ್ಯವಾಗಬೇಕು. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಸಾಧನೆ ಮಾಡಬೇಕು. ತಂದೆ ತಾಯಿಗಳನ್ನು ಸಂತಸ ಪಡಿಸುವ ಕೆಲಸ ಮಕ್ಕಳು ಮಾಡಬೇಕು ಎಂದರು.

ಮುಧೋಳ ತಾಲೂಕಾಧ್ಯಕ್ಷ ಸದಾಶಿವ ಹೊಸಮನಿ ಮಾತನಾಡಿ, ಜು.೨೦ ರಂದು ಮುಧೋಳ ನಗರದಲ್ಲಿ ಅಂಬಿಗ ಸಮಾಜದ ಜಿ¯್ಲÁ ಮಟ್ಟದ ಕಾರ್ಯಕ್ರಮ ಜರುಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಂದು ಹೇಳಿದ ಅವರು ಮಕ್ಕಳು ಸಮಾಜಮುಖಿಯಾಗಿ ಬೆಳಯಬೇಕಾದರೆ ಸಮಾಜದ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ರೂಪಿಸಕೊಳ್ಳಬೇಕು ಎಂದು ಹೇಳಿದರು.

ಪುಂಡಲಿಕ ಕರ್ಣೆ, ವೈ.ಸಿ.ವಾಲಿಕಾರ ಮಾತನಾಡಿದರು. ಬಾಗಲಕೋಟೆ ತಾಲೂಕಾಧ್ಯಕ್ಷ ಸಿ.ಆರ್.ಕೋಲಕಾರ, ಶಿವುಕುಮಾರ ಅಂಬಿಗೇರ, ಬಿ.ವೈ.ಅಂಬಿಗೇರ, ರಾಜು ಬಾಡದ, ವಿರೇಶ ಜೀವರಗಿ, ಎಚ್.ಸಿ.ಅಂಬಿಗೇರ, ಮಹಾಂತೇಶ ಅಂಬಿಗೇರ, ಎಸ್.ಆರ್. ಸನದಿ, ವಿವೇಕಾನಂದ ಜೀರಗಾಳ, ಎಸ್.ವೈ.ವಾಲಿಕಾರ, ರೇಣುಕಾ ಡಿಗ್ಗಿ, ಡಿ.ವೈ.ಅಂಬಿಗೇರ, ಚಂದ್ರು ಸದಪ್ಪಗೋಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net