ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಡಿಸಿ

33333
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಹಳೆಐ ತಾಲೂಕು ಕಚೇರಿ ರಸ್ತೆಯಲ್ಲಿರುವ ಸರ್ವಶಕ್ತ್ಯಾತ್ಮಕೆ ಶ್ರೀಚೌಡೇಶ್ವರಿ ಅಮ್ಮನವರಿಗೆ ಶರನ್ನವರಾತ್ರಿ ಅಂಗವಾಗಿ ಪ್ರತಿದಿನ ಒಂದೊಂದು ಬಗೆಯ ಅಲಂಕಾರ ಹಾಗೂ ವಿಶೇಷಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, 7ನೇ ದಿನವಾದ ಬುಧವಾರ ಸರಸ್ವತಿ ಪೂಜೆ ಪ್ರಯುಕ್ತ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಜಿಪಂ ಸಿಇಒ ಕೆ.ಎನ್.ಅನುರಾಧಾ, ತಹಸೀಲ್ದಾರ್ ಎಚ್.ಬಾಲಕೃಷ್ಣ ಅವರು ಪುಟ್ಟಮಕ್ಕಳಿಗೆ ದೇವಿಯ ಮುಂದೆ ತಟ್ಟೆಯಲ್ಲಿಟ್ಟಿದ್ದ ಅಕ್ಕಿಯಲ್ಲಿ ಓಂ ಮತ್ತು ಅ ಅಕ್ಷರ ಬರೆಸಿ ಅಕ್ಷರಭ್ಯಾಸ ಮಾಡಿಸಿದರು.
ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಮಾತನಾಡಿ, ನವರಾತ್ರಿ ಪೂಜೆ ನಾಡದೇವಿಯ ಹಬ್ಬವಾಗಿದ್ದು, ಇದರ ವಿಶೇಷವಾಗಿ ಇಲ್ಲಿ ಪ್ರತೀವರ್ಷ ಅಕ್ಷರಾಭ್ಯಾಸ ಮಾಡಿಸುವುದು ಮಾದರಿ ಎನಿಸಿದೆ ಎಂದರು.
ಅಕ್ಷರಾಭ್ಯಾಸದಿಂದ ಎಲ್ಲ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದೇನೆ ಎಂದು ಹೇಳಿದರು. ದೇವಾಲಯ ಸಮಿತಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎ.ಎನ್.ವಸಂತಬಾಬು, ಮಾಜಿ ಸದಸ್ಯ ಸೊಸೈಟಿ ಕುಮಾರ್, ಮಾಜಿ ಲಯನ್ಸ್ ಅಧ್ಯಕ್ಷ ಶ್ರೀರಾಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net