

ಬಸವಕಲ್ಯಾಣ: ಅಂತಾರಾಷ್ಟಿಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಆಶ್ರಯದಲ್ಲಿ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ನಿಮಿತ್ತ ಶನಿವಾರ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ಸಾನ್ನಿಧ್ಯದಲ್ಲಿ ಮಕ್ಕಳ ಕೂಟ ಹಾಗೂ ಮಕ್ಕಳಿಂದ ಸಾಮೂಹಿಕ ಇಷ್ಟಲಿಂಗ ಯೋಗ ನಡೆಯಿತು.
ಇಷ್ಟಲಿಂಗಯೋಗ ಪ್ರಾತ್ಯಕ್ಷಿಕೆ ತೋರಿಸಿ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಸ್ಥೂಲ ಶರೀರಕ್ಕೆ ಇಷ್ಟಲಿಂಗ, ಸೂಕ್ಷö್ಮ ಶರೀರಕ್ಕೆ ಪ್ರಾಣಲಿಂಗ, ಕಾರಣಿಕ ಶರೀರಕ್ಕೆ ಭಾವಲಿಂಗಾರ್ಚನೆ ಪೂಜೆ ಮಾಡಿಕೊಳ್ಳಬೇಕು. ನಮ್ಮ ಅಂತರಂಗದಲ್ಲಿ ಪರಮಾತ್ಮನಿದ್ದಾನೆ. ನಮ್ಮ ಅಂತರAಗದಲ್ಲಿರುವ ಪರಮಾತ್ಮನನ್ನು ಅನುಭವಕ್ಕೆ ತಂದುಕೊಳ್ಳುವುದೇ ಇಷ್ಟಲಿಂಗಯೋಗ ಎಂದರು.
ಬಸವಣ್ಣನವರು ನೀಡಿದ ಇಷ್ಟಲಿಂಗ ನಮ್ಮ ದೇವರು. ಬಸವಣ್ಣನವರು ಧರ್ಮಗುರು, ವಚನ ಸಾಹಿತ್ಯ ಧರ್ಮ ಗ್ರಂಥ. ನಿತ್ಯ ವಚನ ಓದುತ್ತೇನೆ. ಪರಿಶುದ್ಧ ಜೀವನ ನಡೆಸುತ್ತೇನೆ. ಸಮಾಜ ಹಾಗೂ ದೇಶಕ್ಕೆ ಕೊಡುಗೆ ನೀಡುತ್ತೇನೆ. ಗುರು-ಹಿರಿಯರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಬೋಧಿಸಿದರು.
ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಕಾರ್ಯದರ್ಶಿ ಅನೀಲ ಶಾಸ್ತಿç ಮಾತನಾಡಿ, ಮಕ್ಕಳು ಇತರರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ದೇವರು ಮತ್ತು ದೇಶಕ್ಕೆ ತನ್ನ ಕರ್ತವ್ಯ ಸಲ್ಲಿಸಬೇಕು. ನಿಷ್ಠೆ, ವಿನಯತೆ, ಧೈರ್ಯಶಾಲಿಯಾಗಿರಬೇಕು. ಶರಣರ ವಿಚಾರಧಾರೆ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಒಳಗೊಂಡಿದೆ. ನಿಸರ್ಗದ ಮಡಲಲ್ಲಿ ಬೆರೆತು ಸಾಮರಸ್ಯದಿಂದ ಬಾಳುವಂತೆ ಶಿಬಿರಗಳು ಸಹಾಯಕ ಆಗಲಿವೆ ಎಂದರು. ಪೂಜ್ಯ ಸತ್ಯಕ್ಕತಾಯಿ, ಕಲ್ಯಾಣಮ್ಮ ಇತರರಿದ್ದರು.