ಮಕ್ಕಳಿಂದ ಶಿವಲಿಂಗಕ್ಕೆ ಕ್ಷೀರಾಭಿಷೇಕ

23-08-Shiva-2
ಚಂದ್ರಯಾನ-3 ಯಶಸ್ವಿಯಾಗಿ ಎಂದು ರಾಯಚೂರಿನ ಎನ್‌ಐಜಿ ಕಾಲನಿಯಲ್ಲಿನ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿನ ಶಿವಲಿಂಗಕ್ಕೆ ಮಕ್ಕಳು ಬುಧವಾರ ಕ್ಷೀರಾಭಿಷೇಕ ನಡೆಸಿದರು. ಸನ್ನಿ ಹಿರೇಮಠ, ಐಶ್ವಯ್ಯ ಕುಲಕರ್ಣಿ, ಮೋಹಿತ್ ನೆಲಹಾಳ, ಸಮೀಕ್ಷಾ ಹಿರೇಮಠ, ಪ್ರಣವ್, ಕೃಷ್ಣವೇಣಿ, ಮಣಿಕಂಠ, ವಿಷ್ಣು ಇದ್ದರು.
Published on

ರಾಯಚೂರು: ವಿಶ್ವವೇ ಕಾತುರದಿಂದ ಎದುರು ನೋಡುತ್ತಿರುವ ಚಂದ್ರಯಾನ-3 ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸಿ ನಗರದ ಎನ್‌ಐಜಿ ಕಾಲನಿಯಲ್ಲಿರುವ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಬುಧವಾರ ಮಕ್ಕಳು ಶಿವಲಿಂಗಕ್ಕೆ ಕ್ಷೀರಾಭಿಷೇಕ ನಡೆಸಿ ಪ್ರಾರ್ಥನೆ ನಡೆಸಿದರು.
ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ ಲ್ಯಾಂಡರ್ ಇಳಿಸುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ದೇಶದ ಜನರು ಕಾತುರರಾಗಿದ್ದಾರೆ. ಪ್ರಗ್ಯಾನ್ ರೋವರ್‌ನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಯಾವುದೇ ಅಡೆತಡೆಯಿಲ್ಲದೆ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ಮಕ್ಕಳು ಪ್ರಾರ್ಥನೆ ನಡೆಸಿದರು.
ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದರ ಜತೆಗೆ ಶ್ಲೋಕಗಳನ್ನು ಹೇಳುತ್ತಾ ಇಸ್ರೋದ ಪ್ರಯತ್ನಕ್ಕೆ ಜಯ ಸಿಗಲಿ. ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಉನ್ನತಿ ಸಾಸಲಿ ಎಂದು ಕ್ಷೀರಾಭಿಷೇಕದ ಮೂಲಕ ಪ್ರಾರ್ಥನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸನ್ನಿ ಹಿರೇಮಠ, ಐಶ್ವಯ್ಯ ಕುಲಕರ್ಣಿ, ಮೋಹಿತ್ ನೆಲಹಾಳ, ಸಮೀಕ್ಷಾ ಹಿರೇಮಠ, ಪ್ರಣವ್, ಕೃಷ್ಣವೇಣಿ, ಮಣಿಕಂಠ, ವಿಷ್ಣು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net