ಮಕ್ಕಳಲ್ಲಿ ಸ್ಪರ್ಧಾಮನೋಭಾವ ಬೆಳೆಸೋಣ

MLK KREEDE 18
Published on

ಮೊಳಕಾಲ್ಮೂರು: ಗ್ರಾಮೀಣ ಕ್ರೀಡೆಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿವೆ ಎಂದು ಮುಖಂಡ ಎನ್.ಬಿ. ಗೋವಿಂದಪ್ಪ ತಿಳಿಸಿದರು.
ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಆಯೋಜಿಸಿದ್ದ ಪ್ರೌಢ ಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ತಂತ್ರಜ್ಞಾನ ಲೋಕದಲ್ಲಿ ಟಿವಿ, ಮೊಬೈಲ್ ಹವ್ಯಾಸಕ್ಕೆ ಒಳಗಾಗಿರುವ ಮಕ್ಕಳು ವಿದ್ಯೆ ಮತ್ತು ಆಟೋಟ ಚಟುವಟಿಕೆಗಳಿಗೆ ಅಷ್ಟಾಗಿ ಒಲವು ತೋರುತ್ತಿಲ್ಲ. ಶಿಕ್ಷಕರು ಇದನ್ನ ಗಂಭೀರವಾಗಿ ಪರಿಗಣಿಸಿ ಬಾಲ್ಯಾವ್ಯಸ್ಥೆಯಲ್ಲೇ ಬುದ್ಧಿಶಕ್ತಿ ವಿಕಸನಕ್ಕೆ ಹೆಚ್ಚು ಆದ್ಯತೆ ಕೊಟ್ಟು ಸ್ಪರ್ಧಾ ಮನೋಭಾವ ಬೆಳೆಸಬೇಕು. ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದನ್ನ ಮನಗಂಡು ಅದಕ್ಕೆ ಉತ್ತೇಜನ ಕೊಡುವಂತೆ ಪ್ರೇರೇಪಿಸಿದರೆ ಜೀವನ ಸಾರ್ಥಕವಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ತಿಪ್ಪಮ್ಮ ಹನುಮಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನೂರಪ್ಪ, ಶಿಕ್ಷಣ ಸಂಯೋಜಕರಾದ ಲೋಹಿತ್, ಓಂಕಾರಪ್ಪ ಹಾಗೂ ಕೆ.ಎಚ್.ಸಣ್ಣಯಲ್ಲಪ್ಪ, ಈರಣ್ಣ, ಮೋಹನ್, ಪ್ರದೀಪ್, ಹನುಮಂತಪ್ಪ, ತಿಪ್ಪೇಸ್ವಾಮಿ, ಶಬ್ಬೀರ್,ಇಷಾಕ್, ಆಂಜನೇಯ ಇದ್ದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಮತ್ತು ಕ್ರೀಡೆ ಭವಿಷ್ಯದ ಅಡಿಗಲ್ಲಾಗಿವೆ. ಆಸಕ್ತಿ ತೋರುವ ಮಕ್ಕಳಿಗೆ ಶಾಲೆಗಳಲ್ಲಿ ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ. ಪ್ರತಿ ನಿತ್ಯ ಬಿಡುವಿನ ವೇಳೆ ಅಭ್ಯಾಸಕ್ಕೆ ಒತ್ತುಕೊಡಲಾಗಿದೆ. ಪೋಷಕರೂ ಹೆಚ್ಚು ಉತ್ತೇಜನ ಕೊಡಬೇಕಿದೆ.
ಶಕೀಲ್ ಅಹಮದ್, ಮುಖ್ಯ ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net