

ಚಿತ್ರದುರ್ಗ: ಪ್ರತಿಭಾವಂತ ವಿದ್ಯಾರ್ಥಿಗಳು,ಸಾಧಕರನ್ನು ಗುರುತಿಸುವುದು ಸಮಾಜದ ಆದ್ಯ ಕರ್ತವ್ಯವೆಂದು ರಾಜ್ಯಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿ ನಿರತರ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಸುಬ್ರಮಣ್ಯಶೆಟ್ಟಿ ಹೇಳಿದರು.
ಎಸ್ಸೆಸ್ಸೆಲ್ಸಿ,ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ನಗರದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಮಕ್ಕಳಲ್ಲಿ ಸಂಸ್ಕಾರ,ಸಂಸ್ಕೃತಿ,ಮೌಲ್ಯಗಳನ್ನು ಬಿತ್ತುವ ಹೊಣೆ ಶಿಕ್ಷಕರು,ಪಾಲಕರ ಮೇಲಿದೆ ಎಂದರು.
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಮಾತನಾಡಿ,ಹಣದಿಂದ ನೆಮ್ಮದಿ ದೊರೆಯದು. ಅಂತರಂಗದ ವಿಶ್ವಾಸದಿಂದ ಮಾತ್ರ ನೆಮ್ಮದಿ ಸಾಧ್ಯವೆಂದರು. ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎ.ಸತ್ಯನಾರಾಯಣಶೆಟ್ಟಿ,ಪ್ರಮುಖರಾದ ಪಿ. ಎಲ್.ಸುರೇಶ್‌ರಾಜು,ಎಲ್.ಆರ್.ವೆಂಕಟೇಶ್‌ಕುಮಾರ್,ನಿವೃತ್ತ ಪ್ರಾಚಾರ‌್ಯ ಟಿ.ವಿ.ಸುರೇಶ್‌ಗುಪ್ತ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಮಲಿಂಗಶ್ರೇಷ್ಠಿ,ತುಮಕೂರಿನ ರಾಧಕೃಷ್ಣನ್,ಡಾ.ರಾಮಲಿಂಗಶೆಟ್ಟಿ,ಪಿ.ಎನ್.ಮೋಹನ್ ಇದ್ದರು. ಶ್ರಾವ್ಯ ಪ್ರಾರ್ಥಿಸಿ, ಡಿ.ಆರ್.ತಿಪ್ಪೇಸ್ವಾಮಿ ಸ್ವಾಗತಿಸಿದರು. ಸುನಿಲ್ ವಡವಡಗಿ ವಂದಿಸಿದರು.