ಮಕ್ಕಳಲ್ಲಿ ಶಿಲ್ಪಕಲೆ ಬಗ್ಗೆ ಆಸಕ್ತಿ ಮೂಡಿಸಿ

bkt-1-1
Published on

ಬಾಗಲಕೋಟೆ: ಭಾರತೀಯ ಸಂಸ್ಕøತಿಯಲ್ಲಿ ಶಿಲ್ಪಕಲೆಗೆ ಬಹಳಷ್ಟು ಮಹತ್ವದಿದ್ದು, ಮಕ್ಕಳಲ್ಲಿ ಶಿಕ್ಷಣದ ಜೊತಗೆ ಶಿಲ್ಪಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು ಎಂದು ಬಾಗಲಕೋಟೆ ಶಾಸಕ ಎಚ್.ವಾಯ್.ಮೇಟಿ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಕಣಾಚಾರಿ ಅವರು ಅನೇಕ ದೇವರ ಮೂರ್ತಿಗಳ ಕೆತ್ತನೆ ಮಾಡಿದ್ದಾರೆ ಎಂದರು.

ಜಕಣಾಚಾರಿ ಅವರು ತಮ್ಮ ಇಡೀ ಜೀವನದಲ್ಲಿ ಶಿಲ್ಪಕಲೆಯ ಕೆತ್ತನೆಯಲ್ಲಿ ತೊಡಗಿದ್ದರು. ಜಕಣಾಚಾರಿ ಅವರ ಮಗ ಡಕಣಾಚಾರಿ ಸಹ ಶಿಲ್ಪಿಯಾಗಿದ್ದು, ಕಪ್ಪೆ ಚನ್ನಿಗರಾಯ ದೇವಸ್ಥಾನವನ್ನು ಅದ್ಬುತ ಕಲಾಕೃತಿಯಿಂದ ನಿರ್ಮಿಸಿದ್ದಾರೆ. ಭಾರತೀಯ ಶಿಲ್ಪಕಲೆಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಲಕ್ಷಾಂತರ ಹಣ ವ್ಯಯಮಾಡಿ ಕೊಂಡುಕೊಳ್ಳುತ್ತಿದ್ದಾರೆ. ಇಂತಹ ಕಲೆ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೇಲ್ಲರದ್ದಾಗಿದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯ ವಸಂತಮಾಧವ ಕಮ್ಮಾರ ಮಾತನಾಡಿ ಭಾರತೀಯ ಸಂಸ್ಕøತಿಯಲ್ಲಿ ಶಿಲ್ಪಕಲೆಗೆ ಹೆಚ್ಚಿನ ಮಹತ್ವವಿದೆ. ಜಗತ್ತಿನ ಅದ್ಬುತ ಶಿಲ್ಪಗಲ ಸಾಲಿನಲ್ಲಿ ನಿಲ್ಲುವ ಜಕಣಾಚಾರಿ ಅವರು ಕಲ್ಲಿನಲ್ಲಿ ಕತ್ತಿನ ಕಲಾಕೃತಿಗಳನ್ನು ನೋಡುವುದೇ ಒಂದು ಭಾಗ್ಯ. ಈ ಕಲೆಯಲ್ಲಿ ವಿಶ್ವಕರ್ಮ ಸಮುದಾಯದವರನ್ನು ಹೊರತುಪಡಿಸಿ ಉಳಿದವರು ಬಹಳ ಕಡಿಮೆ ಇದ್ದಾರೆ ಎಂದರು.

ಮರದ ಕಟ್ಟಿಗೆ, ಬಂಗಾರ ಬೆಳ್ಳಿ ಹಾಗೂ ಕಬ್ಬಿಣದ ಲೋಹದಲ್ಲಿ ಕಲಾಕೃತಿಗಳನ್ನು ಮಾಡಲಾಗುತ್ತಿದೆ. ಈ ಕಲೆ ಹರಪ್ಪ ನಾಗರಿಕತೆ, ಗುಪ್ತರ ಕಾಲದಲ್ಲಿ ಕ್ರಿ.ಶ 104ರಲ್ಲಿ ಶಿಲ್ಪಕಾರರು ಇದ್ದರು. ಜಕಣಾಚಾರರು ಕೇವಲ ಶಿಲ್ಪಿಗಳಾಗದೇ ಗಣತಿ ತಜ್ಞ, ವಿಜ್ಞಾನಿಗಳು ಆಗಿದ್ದರು. ನಾಗಲಿಂಗಾಚಾರ್ಯ ಜಕ್ಕಮ್ಮ ದಂಪತಿಗಳ ಉದರಲ್ಲಿ ಜನಿಸಿದ ಜಕಣಾಚಾರರ್ಯ ಜ್ಯೋತಿಷ್ಯ ಶಾಸ್ತ್ರಜ್ಞರು ಸಹ ಆಗಿದ್ದರು. ಇವರು ಕೆತ್ತನೆ ಮಾಡಿದ ಶಿಲ್ಪಗಳನ್ನು ನೋಡಲು ವಿದೇಶಿಗರು ಬರುತ್ತಿದ್ದಾರೆ. ಇಂತಹ ಶಿಲ್ಪಕಲೆಗಳನ್ನು ನಿರ್ಮಿಸಿದ ಅಮರ ಶಿಲ್ಪಿ ಚಕಣಾಚಾರಿ ಅವರನ್ನು ಸ್ಮರಿಸುವ ಮೂಲಕ ಅವುಗಳನ್ನು ಪೋಷಿಸಬೇಕಿದೆ ಎಂದರು.

ಸಾನಿಧ್ಯ ವಹಿಸಿದ್ದ ಮಳೆಯರಾಜೇಂದ್ರ ಸ್ವಾಮಿಗಳು ಕಾಯಕದಲ್ಲಿ ಶ್ರದ್ದೆ, ಪ್ರಮಾಣಿಕತೆ ಇದ್ದಲ್ಲಿ ಯಶಸ್ಸು ಲಭಿಸುತ್ತದೆ. ನಮ್ಮಲ್ಲಿರುವ ಶಿಲ್ಪಕಲೆಗಳು ನೋಡಲು ಬರುವವರಿಗೆ ನಮ್ಮ ಭಾರತೀಯ ಸನಾತನ ಧರ್ಮ ಪರಿಚಯಿಸುವಂತಾಗಿದೆ. ಪ್ರತಿಯೊಬ್ಬ ಮಹಾಪುರುಷರು ಒಂದು ಕೊಡುಗೆಯನ್ನು ನೀಡಿದ್ದು, ಅವರ ಅನುಕರಣೆ ಮುಖ್ಯವಾಗಿದೆ ಎಂದರು.

ಮುರನಾಳಮಠದ ಜಗನ್ನಾಥ ಸ್ವಾಮಿಗಳು ಮಾತನಾಡಿ ಅಮರಶಿಲ್ಪಿ ಜಕಣಾಚಾರಿಯು ಶಿಲ್ಪಕಲೆಯನ್ನು ಉಸಿರನ್ನಾಗಿಸಿಕೊಂಡಿದ್ದರು. ಅವರು ಕೆತ್ತನೆ ಮಾಡಿದ ಶಿಲ್ಪಗಳು ಇಂದು ಕಾಣಬಹುದಾಗಿದೆ. ಅಂತಹ ಶಿಲ್ಪಗಾರರನ್ನು ನಾವು ಇಂದು ನೆನೆಯುವ ಹಾಗೆ ಉತ್ತಮ ಜ್ಞಾನ ಮತ್ತು ಕಲಾತ್ಮಕ ಪ್ರವೃತ್ತಿ ರೂಢಿಸಿಕೊಂಡಿದ್ದೆ ಆದರೆ ಸಮಾಜ ನಮ್ಮನ್ನು ಸ್ಮರಿಸುವಂತಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಸಮುದಾಯ ಮುಖಂಡರಾದ ಮೌನೇಶ ಪತ್ತಾರ, ಸಂಗಣ್ಣ ಹಡಗಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net