ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ

Oplus_131072
ಬಸವಕಲ್ಯಾಣದ ಅರಿವು ಆಚಾರ ಅನುಭವ ಕೇಂದ್ರದಲ್ಲಿ ಆಯೋಜಿಸಿದ್ದ ಮಕ್ಕಳ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ವಿಶ್ವಗುರು ಬೇಸಿಗೆ ಶಿಬಿರದ ಸಂಯೋಜಕ ಗುರುಪ್ರಸಾದ ಪಂಡಿತ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ನ್ಯಾಯಾಧೀಶ ಎಸ್‌ಎಸ್ ನಾಗರಾಳೆ, ಸುನೀಲಕುಮಾರ ಡವರೆ, ಎಸ್‌ಎಸ್ ನಾಗರಾಳೆ, ಅನಿಲಕುಮಾರ ರಜಪೂತ, ಕಲ್ಯಾಣಮ್ಮ, ಸುಜಾತಾ ಮುರಡೆ, ಸ್ವಪ್ನಾ ಸದಾನಂದೆ ಇತರರಿದ್ದರು.
Published on

ಬಸವಕಲ್ಯಾಣ: ಶಿಕ್ಷಣದ ಜತೆಗೆ ಮಕ್ಳಳಲ್ಲಿ ಮಾನವೀಯ ಮೌಲ್ಯ ಬೆಳೆಸುವಲ್ಲಿ ಪಾಲಕರು ಒತ್ತು ನೀಡಬೇಕು ಎಂದು ಯೂನಿಯನ್ ಬ್ಯಾಂಕ್ ಸ್ಥಳೀಯ ಶಾಖೆ ವ್ಯವಸ್ಥಾಪಕ ಸುನೀಲಕುಮಾರ ಡವರೆ ಹೇಳಿದರು.

ನಗರದ ಅರಿವು ಆಚಾರ ಅನುಭವ ಕೇಂದ್ರದಲ್ಲಿ ವಿಶ್ವಗುರು ಬೇಸಿಗೆ ಶಿಬಿರದಲ್ಲಿ ಭಾನುವಾರ ಆಯೋಜಿಸಿದ್ದ ಮಕ್ಕಳ ಮಾಸಿಕ ಶರಣ ಸಂಗಮ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾಯಾಧೀಶ ಎಸ್‌ಎಸ್ ನಾಗರಾಳೆ ಮಾತನಾಡಿ, ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವು ಅವಶ್ಯಕವಾಗಿದ್ದು, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಪಾಲಕರು ಕಾಳಜಿ ವಹಿಸುವುದು ಅವಶ್ಯಕವಾಗಿದೆ ಎಂದರು.

ಶಿಬಿರದ ಸಂಯೋಜಕ ಗುರುಪ್ರಸಾದ ಪಂಡಿತ, ಉಪನ್ಯಾಸಕ ಬಸವರಾಜ ಸೇರಿ, ಅನಿಲಕುಮಾರ ರಜಪೂತ ಹಾಗೂ ಸುಜಾತಾ ಮುರುಡೆ ಮಾತನಾಡಿದರು. ಕಲ್ಯಾಣಮ್ಮ, ಶುಭಾಂಗಿ ಕಲ್ಯಾಣೆ, ರೇಣುಕಾ ಪಂಚಾಳ, ಅನಿತಾ ಪಾಟೀಲ್, ಸೋನಾಲಿ ಇಂದುಕಾಂದೆ, ಸುಧಾರಾಣಿ ದೇಗಾಂವ, ಸಿದ್ದಮ್ಮ ಮೇತ್ರೆ, ಸಚಿನ್ ಗಾಯಕವಾಡ ಇತರರಿದ್ದರು. ಸ್ವಪ್ನಾ ಸದಾನಂದೆ ನಿರೂಪಣೆ ಮಾಡಿದರು. ನಡೆಸಿಕೊಟ್ಟರು. ಅಶ್ವಿಕಾ ಲಕಶೆಟ್ಟೆ ಪ್ರಾರ್ಥನೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net