ಮಕ್ಕಳಲ್ಲಿ ಮಹಾನ್ ವ್ಯಕ್ತಿಗಳ ಆದರ್ಶ ಬೆಳೆಸಲಿ

21Blh2
Published on

ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ, ಡಾ.ಎಪಿಜೆ ಅಬ್ದುಲ್ ಕಲಾಂ ಸೇರಿ ಮಹಾನ್ ವ್ಯಕ್ತಿಗಳ ಆದರ್ಶ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವಲ್ಲಿ ಪಾಲಕರು ಶ್ರಮಿಸಬೇಕು ಎಂದು ಧಾರವಾಡ ದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

ಇಲ್ಲಿನ ಶ್ರೀ ಎ.ವಿ.ಢಮ್ಮಣಗಿ ವ್ಹಿಜನ್ ಫೌಂಡೇಶನ್ ನ ಕಲ್ಪವೃಕ್ಷ ಮಾದರಿ ಶಾಲೆಯ 16ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ರಜಮತಾಝ್-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯದಲ್ಲೇ ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಸೇವಾ ಮನೋಭಾವನೆ ಬೆಳೆಸಬೇಕು. ಮಕ್ಕಳ ಸವಾರ್ಂಗೀಣ ಪ್ರಗತಿಗೆ ಶ್ರಮಿಸುತ್ತಿರುವ ಕಲ್ಪವಕ್ಷ ಮಾದರಿ ಶಾಲೆ ಕಾರ್ಯ ಶ್ಲಾಘನೀಯ ಎಂದರು.

ಮುಖಂಡ ಹರ್ಷ ಢಮ್ಮಣಗಿ ಮಾತನಾಡಿ, ಶಾಲೆಯ ಬೆಳವಣಿಗೆಯಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ತಿಳಿಸಿದರು. ಪ್ರಾಚಾರ್ಯ ಡಾ.ಹನುಮೇಶ ದುಡ್ಯಾಳ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಕರಕುಶಲ ವಸ್ತು, ಚಿತ್ರಕಲೆ ಪ್ರದರ್ಶಿಸಿದರು. ವೇಗದ ನಡಿಗೆಯಲ್ಲಿ ವಿಜೇತರಾದ ಪಾಲಕರಿಗೆ ಬಹುಮಾನ ವಿತರಿಸಲಾಯಿತು.

ಉದ್ಯಮಿ ಬಾಬು ಢಮ್ಮಣಗಿ, ಸಂಸ್ಥೆ ಅಧ್ಯಕ್ಷ ಮಂಗಳಾ ಢಮ್ಮಣಗಿ, ಆಡಳಿತ ಮಂಡಳಿಯ ಸದಸ್ಯ ದಿನಕರ ಜೋಶಿ, ವಿದ್ಯಾರ್ಥಿ ಪ್ರತಿನಿಧಿ ಕಿಶನ್ ಹಾದಿಮನಿ ಇತರರಿದ್ದರು. ಶ್ರದ್ಧಾ ತಳವಾರ ಹಾಗೂ ಪೂಜಾ ಚಿನಗುಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net