ಮಕ್ಕಳಲ್ಲಿ ಬುದ್ದಿವಂತಿಕೆ ಜತೆ ಹೃದಯವಂತಿಕೆ ಬೆಳೆಸಿ; ಶಾಲಾ ವಾರ್ಷಿಕೋತ್ಸವದಲ್ಲಿ ವೈದ್ಯ ರೋಹಿತ್ ಅಭಿಮತ

09 Nela ph 2 New century School Anualday
Published on

ನೆಲಮಂಗಲ: ಮಕ್ಕಳಲ್ಲಿ ಬುದ್ದಿವಂತಿಕೆ ಬೆಳೆಸುವುದರ ಜತೆಗೆ ಹೃದಯವಂತಿಕೆಯನ್ನು ಬೆಳೆಸುವ ಕೆಲಸ ಶಿಕ್ಷಣ ಸಂಸ್ಥೆಗಳಲ್ಲಿ ಆಗಬೇಕಿದೆ ಎಂದು ವೈದ್ಯ ರೋಹಿತ್ ತಿಳಿಸಿದರು.

ಪಟ್ಟಣದ ಕುಣಿಗಲ್ ವೃತ್ತದ ಬಳಿಯ ಲಕ್ಷ್ಮೀನಾರಾಯಣ ಪಾಟೀದಾರ್ ಸಮುದಾಯಭವನದಲ್ಲಿ ನ್ಯೂಸೆಂಚುರಿ ಶಾಲೆ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಪಾಲಕರ ಮತ್ತು ಶಾಲಾ ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ. ಮೊಬೈಲ್, ಟಿ.ವಿಯಿಂದ ಮಕ್ಕಳನ್ನು ದೂರವಿಡಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ಆರೋಗ್ಯವೂ ಪ್ರಭಾವ ಬೀರಲಿದೆ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದರು.

ಶಾಲಾ ಆಡಳಿತಮಂಡಳಿ, ಶಿಕ್ಷಕರ ಪರಿಶ್ರಮದ ಜತೆಗೆ ಪಾಲಕರ ಸಂಪೂರ್ಣ ಸಹಕಾರದಿಂದ ಶಾಲೆ 20ನೇ ವರ್ಷದ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಶಾಲೆಯಲ್ಲಿನ ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶ ಪಡೆದುಕೊಳ್ಳುತ್ತಿರುವುದು, ಕ್ರೀಡೆ, ಸಂಗೀತ ಸಾಂಸ್ಕೃತಿಕ ರಂಗಗಳಲ್ಲೂ ಪ್ರತಿಭೆಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿ ಎಂದು ಪ್ರಾಂಶುಪಾಲೆ ಮಮತಾ ತಿಳಿಸಿದರು.

ಪ್ರತಿಭಾಪುರಸ್ಕಾರ ಮತ್ತು ಬಹುಮಾನ ವಿತರಣೆ: ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ಶಾಲೆಗೆ ಕೀರ್ತಿತದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕ್ರೀಡೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಪುರಸಭೆ ಸದಸ್ಯ ಕೆ.ಎಂ.ಶಿವಕುಮಾರ್, ಸಿ.ಪ್ರದೀಪ್, ಆನಂದ್, ಲೋಲಾಕ್ಷಿಗಂಗಾಧರ್, ಎನ್.ಎಸ್.ಪೂರ್ಣಿಮಾ, ಸುನಿಲ್‌ಮೂಡ್, ಆಂಜಿನಮೂರ್ತಿ, ಶಾಲಾಕಾರ್ಯದರ್ಶಿ ಗಂಗಪ್ಪ, ಮುಖಂಡ ಕೆ.ಕೆ.ಕೃಷ್ಣಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net