ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಭಕ್ತಿ ಬೆಳೆಸಿ

16SRL01 photo 01
Published on

ಶಿರಾಳಕೊಪ್ಪ: ಜಾಗತಿಕ ಪಿಡುಗಾಗಿರುವ ಭಯೋತ್ಪಾದನೆ ತೊಡೆದುಹಾಕಲು ಎಲ್ಲ ರಾಷ್ಟ್ರಗಳು ಒಂದಾಗಿ ಹೋರಾಡಬೇಕು ಎಂದು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ಜಗದ್ಗುರು ಪಂಚಾಚಾರ್ಯ ಗುರುಕುಲ ಸಂಸ್ಥೆಯಲ್ಲಿ ಗುರುವಾರ ನೂತನ ಸಭಾಂಗಣದ ಪ್ರವೇಶೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಯೋಧ ಮತ್ತು ರೈತ ಈ ದೇಶದ ಎರಡು ಕಣ್ಣುಗಳು. ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ನಮ್ಮ ಸೈನಿಕರು ದಿಟ್ಟ ಹೋರಾಟ ಮಾಡಿ ದೇಶ ರಕ್ಷಣೆ ಮಾಡುತ್ತಿದ್ದಾರೆ. ಇಡೀ ದೇಶವೇ ಅವರಿಗೆ ಬೆನ್ನೆಲುಬಾಗಿ ನಿಂತಿದೆ. ಚಿಕ್ಕಂದಿನಿಂದಲೇ ಮಕ್ಕಳು ದೇಶಭಕ್ತಿ, ರಾಷ್ಟ್ರಪ್ರೇಮ ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಬಾಳಬೇಕೆಂದು ತಿಳಿಸಿದರು. ಮಲೆನಾಡಿನ ಈ ಪರಿಸರದಲ್ಲಿ ನಮ್ಮ ಸಂಸ್ಥೆ ತಾಂತ್ರಿಕ ಕಾಲೇಜು ಮತ್ತು ಪ್ರಾಥಮಿಕ ಶಾಲೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸುತ್ತಿದೆ. ಶರಣರಿಗೆ ಜನ್ಮ ನೀಡಿದ ಶಿಕಾರಿಪುರ ತಾಲೂಕು ಧಾರ್ಮಿಕ, ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಯಾಗಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೊಡುಗೆ ಕಾರಣ ಎಂದು ಸ್ಮರಿಸಿದರು. ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಗುರುಬಸವ ಪಂಡಿತಾರಾಧ್ಯ ಸ್ವಾಮೀಜಿ, ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಡಾ. ಮುರುಘರಾಜ್, ನಿವೇದಿತಾ ರಾಜು, ಪುಟ್ಟರಾಜ ಗೌಡ, ರಾಮನಗೌಡ, ಲತಾ ಯೋಗಿರಾಜ್, ವೆಂಕಟೇಶ, ಸುಮಾ, ವಾಣಿ ಇದ್ದರು.

ಆಧುನಿಕ ತಂತ್ರಜ್ಞಾನ, ಸ್ಪರ್ಧಾತ್ಮಕ ಯುಗದಲ್ಲಿ ದೃಶ್ಯಮಾಧ್ಯಮದಿಂದ ತಾಂತ್ರಿಕ ಕೌಶಲ ಮತ್ತು ನೈಪುಣ್ಯತೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಶೈಕ್ಷಣಿಕ ಅವಧಿಯಲ್ಲಿ ಸಲ್ಲದ ವಿಷಯಗಳ ಕಡೆಗೆ ಗಮನ ನೀಡಬಾರದು. ಬಿ.ವೈ.ವಿಜಯೇಂದ್ರ ಶಾಸಕ ಗುರುಕುಲ ಸಂಸ್ಥೆಯು ತಾಲೂಕಿನಲ್ಲಿ ಪ್ರಥಮವಾಗಿ ತಾಂತ್ರಿಕ ಶಿಕ್ಷಣ ಆರಂಭಿಸಿ, ಗ್ರಾಮೀಣ ಭಾಗದಲ್ಲಿ ಯುವಕರಿಗೆ ಉದ್ಯೋಗ ದೊರಕಿಸಿದೆ. ಈ ಮೂಲಕ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಕಲ್ಪಿಸಿದೆ. ಬಿ.ವೈ.ರಾಘವೇಂದ್ರ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net