ಮಕ್ಕಳಲ್ಲಿ ಬಣ್ಣಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸಬೇಡಿ: ಬಿ.ಎಸ್ ದೇಸಾಯಿ ಕಿವಿ ಮಾತು

ಮಕ್ಕಳಲ್ಲಿ ಬಣ್ಣಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸಬೇಡಿ: ಬಿ.ಎಸ್ ದೇಸಾಯಿ ಕಿವಿ ಮಾತು
Published on

ಹಾಸನ : ಬಣ್ಣಗಳಿಗೆ ಶುಭ ಹಾಗೂ ಅಶುಭದ ಸಂಕೇತ ಬಿಂಬಿಸಿ ಮಕ್ಕಳಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿರುವುದು ತಪ್ಪು ಕಲ್ಪನೆ ಎಂದು ಖ್ಯಾತ ಚಿತ್ರ ಕಲಾವಿದ ಬಿ.ಎಸ್ ದೇಸಾಯಿ ಬೇಸರ ವ್ಯಕ್ತಪಡಿಸಿದರು.

ಹೊಯ್ಸಳ ಚಿತ್ರಕಲಾ ಪರಿಷತ್, ಸಂಸ್ಕಾರ ಭಾರತಿ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ವಿಶ್ವ ಕಲಾ ದಿನದ ಅಂಗವಾಗಿ ಭಾನುವಾರ ನಡೆದ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಬಾಲ್ಯದಲ್ಲಿ ಮಕ್ಕಳ ಎಲ್ಲ ಚಟುವಟಿಕೆಗಳು ನೋಡುಗರಿಗೆ ಸುಂದರವಾಗಿಯೇ ಕಾಣುತ್ತವೆ, ಬಾಲ್ಯದಲ್ಲೇ ಅವರಿಗೆ ಬಣ್ಣಗಳ ಬಗ್ಗೆ ಶುಭ ಹಾಗೂ ಆಶುಭದ ಸಂಕೇತ ಬಿಂಬಿಸುವುದು ಬೇಡ ಎಂದು ಸಲಹೆ ನೀಡಿದರು.

ಕಲಾ ಸ್ಪರ್ಧೆ ಹಾಗೂ ಪ್ರದರ್ಶನಗಳನ್ನು ಮಾಡುವುದರಿಂದ ಮಕ್ಕಳಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ ಈ ನಿಟ್ಟಿನಲ್ಲಿ ಯಾವುದೇ ಪ್ರತಿಭೆ ಹೊರ ಹೊಮ್ಮಬೇಕಾದರೆ ಸ್ಪರ್ಧೆ ಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದರು

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ.ಎಂ ಹರೀಶ್ ಮಾತನಾಡಿ, ವೇದಿಕೆ ಸಿಕ್ಕಾಗ ಮಾತ್ರ ನಮ್ಮೊಳಗಿನ ವ್ಯಕ್ತಿತ್ವ ವಿಕಸನ ಹಾಗೂ ತಮ್ಮೊಳಗಿನ ಪ್ರತಿಭೆ ಪ್ರದರ್ಶಿಸಲು ಸಾಧ್ಯ, ಆದುದರಿಂದ ಬೇರೆ ಜಿಲ್ಲೆಗಳಿಗೆ ಹೋಗಿ ತಮ್ಮ ಪ್ರತಿಭೆ ಪ್ರದರ್ಶಿಸುವ ಬದಲಾಗಿ ನಮ್ಮ ಜಿಲ್ಲೆಯಲ್ಲೇ ಇಂತಹ ವೇದಿಕೆ ಸೃಷ್ಟಿ ಮಾಡಿಕೊಟ್ಟಿರುವ ಹೊಯ್ಸಳ ಚಿತ್ರಕಲಾ ಪರಿಷತ್ ನ ಕಾರ್ಯ ಶ್ಲಾಘನೀಯ,

ಮಕ್ಕಳಲ್ಲಿ ಇರುವ ಪ್ರತಿಭೆ ಕೆಲವೊಮ್ಮೆ ಪೋಷಕರಿಗೂ ಗೊತ್ತಿರುವುದಿಲ್ಲ, ಅವುಗಳನ್ನು ಹೊರ ತರುವ ಕೆಲಸವನ್ನು ಅನೇಕ ಕಿರುತೆರೆಯ ಕಾರ್ಯಕ್ರಮಗಳು ಮಾಡಿಕೊಂಡು ಬಂದಿವೆ. ಅದೇ ರೀತಿ ಹೊಯ್ಸಳ ಚಿತ್ರಕಲಾ ಪರಿಷತ್ ಕೂಡ ಚಿತ್ರಕಲೆ ಪ್ರದರ್ಶನಕ್ಕೆ ಜಿಲ್ಲೆಯ ಜನರಿಗೆ ಅವಕಾಶ ಒದಗಿಸಿ ಅವರಿಗೆ ಪ್ರೋತ್ಸಾಹಿಸುತ್ತಾ ಬಂದಿದೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಹೊಯ್ಸಳ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಶಂಕರಪ್ಪ ಮಾತನಾಡಿ, ವಿಶ್ವ ಕಲಾವಿದರ ದಿನವನ್ನು ಕಳೆದ 6 ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಮಾಡಲಾಗುವುದು ಎಂದರು

ಇದೇ ವೇಳೆ ಉತ್ತಮ ಚಿತ್ರ ಬರೆದು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮನ ವಿತರಿಸಲಾಯಿತು

ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕರ ಸಂಘ. ಅಧ್ಯಕ್ಷ ವೈ.ಬಿ.ರವಿ, ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ. ರಮೇಶ್‌ಹೆಚ್ ಎಂ, ಖಜಾಂಚಿ ಟಿ.ಎನ್.ಲಿಂಗರಾಜ್, ಚಿತ್ರಕಲಾ ಶಿಕ್ಷಕ ವೈ.ಹೆಚ್ ಜಯರಾಂ. ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net