ಮಕ್ಕಳಲ್ಲಿ ಪರಿಸರ ಕಾಳಜಿ ಹೆಚ್ಚಿಸುವ ಕಾರ್ಯಕ್ರಮಗಳಾಗಲಿ

21 gkl 01
ಅಡವಿ ಅಲರ್ಟ್ ಫೌಂಡೇಷನ್ ವತಿಯಿಂದ ಚೆನ್ನಂಗಿ ಸರ್ಕಾರಿ ಶಾಲೆಗೆ ಪೀಠೋಪಕರಣ ಹಾಗೂ ಕಂಪ್ಯೂಟರ್ ವಿತರಿಸಲಾಯಿತು.
Published on

ಗೋಣಿಕೊಪ್ಪ: ಪರಿಸರದ ಬಗ್ಗೆ ಮಕ್ಕಳಲ್ಲಿ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರಿನ ಅಡವಿ ಅಲರ್ಟ್ ಫೌಂಡೇಷನ್ ಅಧ್ಯಕ್ಷ ಪವನ್ ಜೋಶಿ ಹೇಳಿದರು.

ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಫೌಂಡೇಷನ್‌ನ ವತಿಯಿಂದ ಡೆಸ್ಕ್, ಬೆಂಚ್, ಕಂಪ್ಯೂಟರ್ ಹಾಗೂ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.

ಅರಣ್ಯದಂಚಿನಲ್ಲಿರುವ ಶಾಲೆಗಳಿಗೆ ಬಹುತೇಕ ಕಾರ್ಮಿಕರ ಮಕ್ಕಳು ಆಗಮಿಸುತ್ತಾರೆ. ಇಂತಹವರಲ್ಲಿ ವಿಶೇಷವಾಗಿ ಪರಿಸರ ಕಾಳಜಿ ನೋಡಬಹುದಾಗಿದೆ. ವಿದ್ಯಾಭ್ಯಾಸದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ವಿತರಿಸಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚೆನ್ನಯ್ಯನಕೋಟೆ ಗ್ರಾಪಂ ಅಧ್ಯಕ್ಷ ಮೇಕೇರಿರ ಅರುಣ್ ಕುಮಾರ್, ಚೆನ್ನಂಗಿ ಶಾಲೆಯಲ್ಲಿ ಬಹುತೇಕರು ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿದ್ದು, ಕಲಿಕಾ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದೆ. ಲಭ್ಯವಿರುವ ಶಿಕ್ಷಕರ ಸಹಾಯದಿಂದ ವಿದ್ಯಾರ್ಥಿಗಳು ಪ್ರಗತಿ ಸಾಧಿಸುತ್ತಿದ್ದಾರೆ. ಪಂಚಾಯಿತಿ ವತಿಯಿಂದ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಲಾಗಿದ್ದು, ಮುಂದೆಯೂ ಆದ್ಯತೆ ಮೇರೆಗೆ ಅನುದಾನ ನೀಡಲಾಗುವುದು ಎಂದರು.

ಬಿಇಒ ಪ್ರಕಾಶ್, ಕ್ಷೇತ ್ರಸಮನ್ವಯಾಧಿಕಾರಿ ವನಜಾಕ್ಷಿ, ಅಡವಿ ಸಂಸ್ಥೆಯ ಮುಖ್ಯಸ್ಥ ಪವನ್ ಜೋಶಿ ಹಾಗೂ ಇತರ ಪ್ರಮುಖರನ್ನು ಸನ್ಮಾನಿಸಲಾಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವೈ.ಕೆ.ಬೇಬಿ ಅಧ್ಯಕ್ಷತೆ ವಹಿಸಿದ್ದರು. ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಮುಖ್ಯಶಿಕ್ಷಕ ಬಿ.ಎಸ್.ರಂಗಸ್ವಾಮಿ, ಸ್ಥಳೀಯ ಗಿರಿಜನ ಮುಖಂಡರಾದ ಪಿ.ಕೆ.ಸಿದ್ದಪ್ಪ, ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಲಯನ್ಸ್ ಸಂಸ್ಥೆ ಸದಸ್ಯರಾದ ಎಂ.ಎಸ್.ಪವಿ, ಕಾಫಿ ಬೆಳೆಗಾರ ವಾಟೇರಿರ ಸುರೇಶ್, ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಮೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net