ಕೊಳ್ಳೇಗಾಲ: ಪಟ್ಟಣದ ವಿಸ್ಡಮ್ ಶಾಲೆಯಲ್ಲಿ ಇತ್ತೀಚೆಗೆ ನೂತನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಅಮೇಚೂರ್ ಕಬಡ್ಡಿ ಅಸೋಷಿಯೇಶನ್ ರಾಜ್ಯ ಸಂಘಟನಾ ಕಾರ್ಯದರ್ಶಿ ಚೆಲುವ ರಾಜ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕು. ಈ ಕಾರ್ಯಕ್ರಮ ಅದಕ್ಕೆ ಸಹಕಾರಿಯಾಗಿದೆ. ಶಾಲೆಯ ಅಧ್ಯಕ್ಷ ಅಥವಾ ಇನ್ನಿತರ ಜವಾಬ್ದಾರಿಗಳನ್ನು ನಿರ್ವಹಿಸುವ ಹುದ್ದೆಗಳನ್ನು ಮಕ್ಕಳಿಗೆ ನೀಡಿದಾಗ ಅವರಲ್ಲಿ ನಾಯಕತ್ವದ ಗುಣ ಬೆಳೆಯುವುದರ ಜತೆಗೆ ಸಂಘಟನೆ ಮಾಡುವ ಶಕ್ತಿಯು ಹೆಚ್ಚಾಗುತ್ತದೆ ಎಂದರು.
ಈ ವೇಳೆ ಶಾಲೆಯ ಅಧ್ಯಕ್ಷರಾಗಿ ಎಸ್.ಲಿಖಿತ್, ಉಪಾಧ್ಯಕ್ಷರಾಗಿ ಎಂ.ಮಧುಸೂದನ್, ಕ್ರೀಡಾ ಅಧ್ಯಕ್ಷರಾಗಿ ಬಿ.ಮಲ್ಲಿಕಾರ್ಜುನ, ಸಾಂಸ್ಕೃತಿಕ ಅಧ್ಯಕ್ಷ ಸಿ.ಗಗನ್, ಸಾಂಸ್ಕೃತಿಕ ಉಪಾಧ್ಯಕ್ಷೆ ಶುಭಾಷಿಣಿ, ಶಾಲೆಯ ಅಲ್ಫ ತಂಡದ ಅಧ್ಯಕ್ಷ ಲಿಖಿತ್ ಮನೋಹರ್, ಉಪಾಧ್ಯಕ್ಷ ಮಹಾಮಾಯ ಮೌರ‌್ಯ, ಬೀಟಾ ತಂಡದ ಅಧ್ಯಕ್ಷ ಜೋವಿಯ ಕೆ ಜೋಸೆಫ್, ಉಪಾಧ್ಯಕ್ಷ ಸಂಜಯ್ ವರ್ಷನ್, ಗಾಮ ತಂಡದ ಅಧ್ಯಕ್ಷ ಎಸ್.ಅನಘ, ಉಪಾಧ್ಯಕ್ಷ ಎನ್.ಮಿಥುನ್, ಡೆಲ್ಟ ತಂಡದ ಅಧ್ಯಕ್ಷ ಆರ್.ಕೆ ಅಂಜನಾ, ಉಪಾಧ್ಯಕ್ಷ ಎ.ಎಂ ಗೌತಮ್ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿಸ್ಡಮ್ ಶಾಲೆಯ ಕಾರ್ಯದರ್ಶಿ ಮಧು ಮಲ್ಲೇಶ್, ಮುಖ್ಯ ಶಿಕ್ಷಕಿ ಭ್ರಮರಾಂಭ, ಶಿಕ್ಷಕರು ಇದ್ದರು.