ಮಕ್ಕಳಲ್ಲಿ ದೈವತ್ವ ಕಾಣುವುದು ಭಾಗ್ಯ

bhr durga
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿದ್ದ ದೇವರ ವೇಷ ಸ್ಪರ್ಧೆಯನ್ನು ಕಲಾವಿದೆ ನಾಟ್ಯ ಉದ್ಘಾಟಿಸಿದರು. ಬಿ.ಚನ್ನಕೇಶವ, ಭಾಸ್ಕರ್ ವೆನಿಲ್ಲಾ, ಚೈತನ್ಯ ವೆಂಕಿ, ಮುದರ ಪೂಜಾರಿ, ಕೆ.ಎಂ.ರಾಘವೇಂದ್ರ, ರಂಗಿಣಿರಾವ್, ಶ್ರುತಿ, ವಿಶ್ವನಾಥ್, ಕಾವ್ಯಾ ಶೆಟ್ಟಿ ಇದ್ದರು.
Published on

ಬಾಳೆಹೊನ್ನೂರು: ನವರಾತ್ರಿಯಲ್ಲಿ ಪುಟಾಣಿ ಮಕ್ಕಳಿಗೆ ಪಾಲಕರು ದೇವರ ವೇಷಭೂಷಣಗಳನ್ನು ತೊಡಿಸಿ ದೈವತ್ವ ಕಾಣುವುದು ಜೀವನದ ಅತ್ಯುತ್ತಮ ಭಾಗ್ಯ ಎಂದು ಭರತನಾಟ್ಯ ಕಲಾವಿದೆ ನಾಟ್ಯ ಹೇಳಿದರು.

ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಶರನ್ನವರಾತ್ರಿ ಅಂಗವಾಗಿ ಬುಧವಾರ ಆಯೋಜಿಸಿದ್ದ ದೇವರ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಸಣ್ಣ ಮಕ್ಕಳನ್ನು ಹಿರಿಯರು ದೇವರಿಗೆ ಹೋಲಿಸುತ್ತಾರೆ. ಮಕ್ಕಳು ನಿಷ್ಕಲ್ಮಶ ಮನಸ್ಸನ್ನು ಹೊಂದಿರುತ್ತಾರೆ. ಅಂಥ ಮಕ್ಕಳಿಗೆ ವರ್ಷದಲ್ಲಿ ಒಮ್ಮೆಯಾದರೂ ದೇವರ ವೇಷ ತೊಡಿಸಿ ಅವರಲ್ಲಿ ದೇವರನ್ನು ಕಾಣುವುದು ನೆಮ್ಮದಿ ನೀಡಲಿದೆ ಎಂದರು.

ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ರಾಘವೇಂದ್ರ ಮಾತನಾಡಿ, ಮಕ್ಕಳಲ್ಲಿ ದೈವ ಸ್ವರೂಪ ಕಾಣುವ ಉದ್ದೇಶದಿಂದ ದೇವರ ವೇಷ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ. ಇಂಥ ಸ್ಪರ್ಧೆಗಳ ಮೂಲಕ ಸಂಸ್ಕೃತಿ, ಸಂಸ್ಕಾರ ಬೆಳೆಸಲು ಸಾಧ್ಯವಿದೆ ಎಂದರು.

ನವರಾತ್ರಿ ದುರ್ಗಾದೇವಿ ಪೂಜಾ ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವಗೌಡ ಬರಗಲ್, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಮುದರ ಪೂಜಾರಿ, ಎಚ್.ಎನ್.ವಿಶ್ವನಾಥ್, ರಂಗಿಣಿ ರಾವ್ ಸೀತೂರು, ಶ್ರುತಿ, ಕಾವ್ಯಾ ಶೆಟ್ಟಿ, ಆರ್.ಡಿ.ಮಹೇಂದ್ರ, ಶಿವರಾಮ ಶೆಟ್ಟಿ, ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ಡಿ.ಎನ್.ಸುಧಾಕರ್, ನಾಗರಾಜ್ ಬರಗಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net