ಮಕ್ಕಳಲ್ಲಿ ದೇಶಪ್ರೇಮ ಬಿತ್ತುವ ಕೆಲಸವಾಗಲಿ

Capture3
Published on

ಕಮಲನಗರ: ಮಕ್ಕಳಲ್ಲಿ ದೇಶಪ್ರೇಮವನ್ನು ಬಿತ್ತುವ ಕೆಲಸವಾಗಬೇಕು. ದೇಶ, ಸಂವಿಧಾನ, ರಾಷ್ಟ್ರಧ್ವಜವನ್ನು ಗೌರವಿಸುವಂಥ ಉತ್ತಮ ವಿಷಯಗಳನ್ನು ಅವರಲ್ಲಿ ತುಂಬಬೇಕು ಎಂದು ಪಿಎಸ್ಐ ನಂದಿನಿ ಎಸ್ ಹೇಳಿದರು.

ಠಾಣಾಕುಶನೂರ ವಿರಕ್ತಮಠದಲ್ಲಿ ಸೋಮವಾರ ಸ್ವಾತಂತ್ರೃದ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೈಜ ಅರ್ಥ ಕಳೆದುಕೊಂಡು ಸಂಕೀರ್ಣವಾದ ಬದುಕಿನ ದಾಸರಾಗಿ ಜೀವಿಸುತ್ತಿರುವ ಈ ಸಮಾಜದಲ್ಲಿ ಹೆಣ್ಣು ಮಕ್ಕಳು ವಿಶೇಷವಾಗಿ ತಾಯಂದಿರು ಮಕ್ಕಳಲ್ಲಿ ಸಂಸ್ಕಾರದ ಜತೆಗೆ ರಾಷ್ಟ್ರಪ್ರೇಮ ಬೆಳೆಸಬೇಕು ಎಂದರು.

ಸಕರ್ಾರದಿಂದ ಸಿಗುವ ಪ್ರತಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಅದರಿಂದ ಮಕ್ಕಳ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕನರ್ಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸಂಜೀವಕುಮಾರ ಜುಮ್ಮಾ ಮಾತನಾಡಿ, ಮಕ್ಕಳಲ್ಲಿ ಸತ್ಯ ಹಾಗೂ ಮುಗ್ಧತೆ ಇರುತ್ತದೆ. ನಾವು ಹೇಗೆ ಕಲಿಸುತ್ತೇವೆ ಹಾಗೇ ಮಕ್ಕಳು ಕಲಿಯುತ್ತಾರೆ. ಪಾಲಕರ ಕಾಳಜಿಯೂ ಅತ್ಯಂತ ಪ್ರಮುಖವಾಗಿದೆ. ಅವರಲ್ಲಿ ಐಕ್ಯತೆಯ ಗುಣಗಳನ್ನು ಬೆಳೆಸಬೇಕು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಮಾತನಾಡಿದರು. ವಿರಕ್ತಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಮೂತರ್ೆಪ್ಪ ಕೊಸಮೆ ಅಧ್ಯಕ್ಷತೆ ವಹಿಸಿದ್ದರು.

ತಾಪಂ ಮಾಜಿ ಅಧ್ಯಕ್ಷ ಗಿರೀಶ ಒಡೆಯರ್, ಶಿವಶರಣಪ್ಪ ವಲ್ಲೆಪುರೆ, ಮನ್ಮಥಪ್ಪ ಜೀಗರ್ೆ, ಶಂಕರೆಪ್ಪ ಪರಶೆಟ್ಟಿ, ಉಮಾಕಾಂತ ಬೀರಾದರ, ಶಿವಲಿಂಗ ಪರಶೆಟ್ಟೆ, ಸಂತೋಷ ಸ್ವಾಮಿ, ಸೋಪನರಾವ ಜಾಧವ್, ಶಿವಕುಮಾರ ಜೀಗರ್ೆ, ಸುನೀಲ ಕಸ್ತೂರೆ, ಪ್ರಶಾಂತ ಜೀಗರ್ೆ, ಸಂಗಮೇಶ ಪಾಟೀಲ್, ಸಿದ್ದಪ್ಪ ಬೋಚರೆ, ಮಾರುತಿ ಕೋಳಿ, ಮೆಹಬೂಬ್ಸಾಬ್, ಜೀವನ ಕೊಂಗೆ, ರಾಜಕುಮಾರ ಬೆಣ್ಣೆ ಇತರರಿದ್ದರು.

ಜಗನ್ನಾಥ ಜೀಗರ್ೆ ಸ್ವಾಗತಿಸಿದರು. ಶಾಂತಕುಮಾರ ಬೋಚರೆ ನಿರೂಪಣೆ ಮಾಡಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಜನ್ಮದಿನ ಪ್ರಯುಕ್ತ 52 ಸಸಿ ನೆಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ರಾಷ್ಟ್ರಧ್ವಜ ವಿತರಿಸಲಾಯಿತು.

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರೃದ ಅಮೃತ ಮಹೋತ್ಸವ ಸವಿನೆನಪಿಗಾಗಿ ಹರ್ ಘರ್ ತಿರಂಗಾ ಅಭಿಯಾನ ಆಯೋಜಿಸಲು ಕರೆಕೊಟ್ಟಿದ್ದು, ಎಲ್ಲರೂ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು.
| ರಾಮಶೆಟ್ಟಿ ಪನ್ನಾಳೆ, ಬಿಜೆಪಿ ತಾಲೂಕು ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net