ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸಲಿ

01 HANUR 1 B
Published on

ಹನೂರು: ನವನವೀನ ಉಡುಗೆ ತೊಟ್ಟು ಸಂಭ್ರಮಿಸಿದರು. ಕುಂಭ ಕಳಸವನ್ನು ಹೊತ್ತು ಸಾಗಿದರು. ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಹುಲಿ ವೇಷಧಾರಿಗಳ ಆರ್ಭಟ ಜೋರಾಗಿತ್ತು. ಎಲ್ಲರ ಮುಖದಲ್ಲೂ ಸಂತಸ ಮನೆ ಮಾಡಿತ್ತು.
ಹೌದು ಇದು ಹನೂರಿನಲ್ಲಿ ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳು.
ಕಲಿಕಾ ಹಬ್ಬದ ಹಿನ್ನೆಲೆಯಲ್ಲಿ ಕ್ಟಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದು, ಪಟ್ಟಣದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರೆದಿದ್ದರು. ಬಾಲಕರು ಪಂಚೆ ಶರ್ಟ್ ಧರಿಸಿದರೆ, ಬಾಲಕಿಯರು ಹೊಸ ಸೀರೆಯನ್ನುಟ್ಟು ಮಿಂಚಿದರು. ಈ ವೇಳೆ ಶಾಸಕ ಆರ್. ನರೇಂದ್ರ ಎತ್ತಿನ ಗಾಡಿ ಏರುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ವಿದ್ಯಾಥಿಗಳು ವಾದ್ಯಮೇಳದೊಂದಿಗೆ ಶಿಕ್ಷಕರ ಜತೆಗೂಡಿ ಶಾಲೆಯ ಆವರಣದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಹೊರಟು ಬಂಡಳ್ಳಿ ರಸ್ತೆಯಲ್ಲಿನ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಜಿ.ವಿ ಗೌಡ ಪ್ರೌಢಶಾಲೆ ಆವರಣಕ್ಕೆ ತಲುಪಿದರು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಮಾರಿ ಕುಣಿದ ಪ್ರದರ್ಶಿಸುವುದರ ಮೂಲಕ ಕುಣಿದು ಕುಪ್ಪಳಿಸಿದರು. ಹುಲಿ ವೇಷಧಾರಿ ವಿದ್ಯಾರ್ಥಿಗಳ ಕುಣಿತ ಎಲ್ಲರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net