ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಸಿ

8blk8
ಭಾಲ್ಕಿ ತಾಲೂಕಿನ ಕೋನಮೇಳಕುಂದಾದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಉದ್ಘಾಟಿಸಿದರು. ಸೂರ್ಯಕಾಂತ ಸುಂಟೆ, ಸಂತೋಷ ಮಾನಕಾರ, ಅನಿಲ ಬಿರಾದಾರ್ ಇತರರಿದ್ದರು.
Published on

ಭಾಲ್ಕಿ: ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಕಲಿಕಾ ಆಸಕ್ತಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ಕೋನಮೇಳಕುಂದಾ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಧಿಕಾರಿಗಳ ಕಾರ್ಯಾಲಯ ಸಮೂಹ ಸಂಪನ್ಮೂಲ ಕೇಂದ್ರ ಹಲಬರ್ಗಾ ಕ್ಲಸ್ಟರ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಎಫ್‌ಎಲ್‌ಎನ್ ಉರ್ದು ಕಲಿಕಾ ಹಬ್ಬ-೨೦೨೪-೨೫ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶುದ್ಧ ಓದು, ಸ್ಪಷ್ಟ ಬರಹ ಹಾಗೂ ಗಣಿತದ ಮೂಲ ಕ್ರಿಯೆಗಳನ್ನು ಆರಂಭದಲ್ಲಿ ಕಲಿಸುವ ಮೂಲಕ ಗುಣಾತ್ಮಕ ಕಲಿಕೆ ಸಾಧ್ಯವಿದೆ. ಇಂತಹ ಕಲಿಕಾ ಹಬ್ಬಗಳಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುತ್ತದೆ. ಇಂತಹ ಸ್ಪರ್ಧೆಗಳಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದರು.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಸುಂಟೆ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ್, ಗ್ರಾಪಂ ಅಧ್ಯಕ್ಷ ಸಂತೋಷ ಮಾನಕಾರ ಮಾತನಾಡಿದರು.

ಸೋಮನಾಥ ವರ್ದಾ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಶಿಕ್ಷಕಿ ಹೇಮಾವತಿ ಅಧ್ಯಕ್ಷತೆ ವಹಿಸಿದ್ದರು.

ಬಸವರಾಜ ದಾನಾ, ಉತ್ತಮ ಸಿಂಧೆ, ನಿರ್ಮಲಾ ಮೋರೆ, ಚೇತನಾ, ರಾಜಕುಮಾರ ಘಂಟೆ, ಅಂಬರೀಶ್ ಖಂಡ್ರೆ, ಅನಿಲ ಬಿರಾದಾರ್, ಸವಿತಾ, ಶಾಂತಾ ಮೋರೆ, ಅನಿತಾ ಮುದಾಳೆ, ರಾಣಾ ಪ್ರತಾಪ, ಯಾಸ್ಮಿನ, ಖಾನ್ ಖೈಸರ ಬೇಗಂ, ಫೀರದೋಷ ಫಾತಿಮಾ ಇತರರಿದ್ದರು. ಸಂತೋಷ ಮುದಾಳೆ ಸ್ವಾಗತಿಸಿದರು. ಕೌಸರ ಫಾತೀಮಾ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net