ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ

16 KAMPLI 03
Published on

ಕಂಪ್ಲಿ: ಎಮ್ಮಿಗನೂರು ಗ್ರಾಮದ ಎಸ್‌ಡಬ್ಲುೃಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಆಂದೋಲನ ಜಾಥಾ ಸೋಮವಾರ ನಡೆಯಿತು.

ಮುಖ್ಯ ಶಿಕ್ಷಕ ಮಂಜಪ್ಪ ಹೂಗಾರ ಜಾಥಾಕ್ಕೆ ಚಾಲನೆ ನೀಡಿ, 5.5ವರ್ಷದಿಂದ 6ವರ್ಷದೊಳಗಿನ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಡನೆ ನಾನಾ ಸೌಲಭ್ಯ ಕಲ್ಪಿಸಿದ್ದು, ಸದುಪಯೋಗಪಡಿಸಿಕೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ತಿಳಿಸಿದರು.

ಶಿಕ್ಷಕರಾದ ಜ್ಯೋತಿ ಎಂ.ಎಂ., ಸಂಗಮ್ಮ, ಲಕ್ಷ್ಮೀ, ವೀರೇಶ, ರಾಜಾಸಾಬ್, ಮಲ್ಲೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net