ಮಕ್ಕಳಂತೆ ಗಿಡ ಜೋಪಾನ ಮಾಡಲಿ

4
ಅನಂತಪುರ ಗ್ರಾಮದ ಕೆರೆ ಆವರಣದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಿಸಲಾಯಿತು. ತಾಪಂ ಇಒ ಶಿವಾನಂದ ಕಲ್ಲಾಪುರ, ಮೆಹಬೂಬ್ ಕೊತ್ವಾಲ್, ಶಂಕರಾನಂದ ಗುಂದವಾನ, ಗುರುಪಾದ ಸೋಮಣ್ಣವರ, ನಾನಾ ಡಾಂಗೆ, ಬಸವರಾಜ ಅಥಣಿಕರ, ಶಾನು ನಾಯಕ ಇತರರಿದ್ದರು.
Published on

ಅಥಣಿ ಗ್ರಾಮೀಣ: ಸಸಿಗಳನ್ನು ಮಕ್ಕಳಂತೆ ಪೋಷಣೆ ಮಾಡಿದಾಗ ಮಾತ್ರ ಪರಿಸರದ ಸಂರಕ್ಷಣೆ ಸಾಧ್ಯ ಎಂದು ಅಥಣಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಹೇಳಿದರು.

ಅಥಣಿ ತಾಲೂಕಿನ ಅನಂತಪುರ ಗ್ರಾಮದ ಕೆರೆಯ ಆವರಣದಲ್ಲಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಪರಿಸರ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಪಂ ಸಹಾಯಕ ನಿರ್ದೇಶಕ ಮೆಹಬೂಬ್ ಕೊತ್ವಾಲ್ ಮಾತನಾಡಿದರು. ಪಿಡಿಒ ಶಂಕರಾನಂದ ಗುಂದವಾನ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಗುರುಪಾದ ಸೋಮಣ್ಣವರ, ಮುಖಂಡರಾದ ನಾನಾ ಡಾಂಗೆ, ಬಸವರಾಜ ಅಥಣಿಕರ, ಶಾನು ನಾಯಕ, ಬಾಗಪ್ಪ ಡಾಂಗೆ, ಧರೆಪ್ಪ ಡವಳಗಿ, ಕುಮಾರ ಬನಸೋಡೆ, ಶಾಹಾನಮಾಜ್ ಜಾರೆ, ಸಾಗರ ಮಾಲಗಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net