ಮಕ್ಕಳ ಸಹಾಯವಾಣಿಯ ಅರಿವು ಮೂಡಿಸಿ

ಚೈಲ್ಡ್ ಲೈನ್ ಸಲಹಾ ಸಮಿತಿ ಸಭೆ
Published on


ಯಾದಗಿರಿ: ಶಾಲೆಗಳಲ್ಲಿ ಪ್ರತಿದಿನ ಬೆಳಗಿನ ವೇಳೆ ಮಕ್ಕಳಿಗೆ ಸಮಸ್ಯೆಯಾದರೆ 1098 ಸಂಖ್ಯೆಗೆ ಕರೆ ಮಾಡುತ್ತೇವೆ ಎಂದು ಧ್ಯೇಯವಾಕ್ಯದೊಂದಿಗೆ ಶಪಥ ಮಾಡುವುದನ್ನು ರೂಢಿಸಿಕೊಳ್ಳಲು ಸಂಬಂಸಿದ ಅಕಾರಿಗಳಿಗೆ ಜಿಲ್ಲಾಕಾರಿ ಸ್ನೇಹಲ್ ಆರ್., ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಚೈಲ್ಡ್ ಹೆಲ್ಪ್ಲೈನ್ ಸಲಹಾ ಮಂಡಳಿ ಸಭೆಯಲ್ಲಿ ಮಾತನಾಡಿ, ಆರ್ಟಿಇ, ಪೋಕ್ಸೋ ಕಾಯ್ದೆ, ಬಾಲನ್ಯಾಯ ಕಾಯ್ದೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. 1098 ಸಹಾಯವಾಣಿಯು ಸಂಕಷ್ಟ್ಟದಲ್ಲಿರುವ ಮಕ್ಕಳ ಪಾಲಿನ ಸಂಜೀವಿನಿ. ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ ಎಂದರು.

ಮಕ್ಕಳನ್ನು ಆಟೋ, ಟ್ಯಾಕ್ಸಿ ಇತ್ಯಾದಿ ವಾಹನಗಳಲ್ಲಿ ಕೂಲಿ ಕೆಲಸಕ್ಕಾಗಿ ಸಾಗಿಸುತ್ತಿರುವದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಸರಕಾರಿ ಮತ್ತು ಅನುದಾನ, ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ, ನಗರ ಮತ್ತು ಗ್ರಾಮಾಂತರಗಳಿಗೆ ಸಂಚರಿಸುವ ಬಸ್ ಮತ್ತು ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಬ್ಯಾಗ್ ಗಳನ್ನು ವಿತರಿಸಲು ಬರುವಂಥ ಸಮಾಜ ಸೇವಕರಿಗೆ , ಜನಪ್ರತಿನಿಗಳಿಗೆ ಅವುಗಳ ಮೇಲೆ ಮಕ್ಕಳ ಸಹಾಯವಾಣಿಯ ಲೋಗೋ ಕೂಡಾ ಹಾಗುವಂತೆ ಸಲಹೆ ಕೊಡಿ. ಬಾಲ್ಯವಿವಾಹ ಕಾನೂನಿನ ಪ್ರಕಾರ ಅಪರಾಧ. ಈ ಬಗ್ಗೆ ಗ್ರಾಮೀಣ ಭಾಗದಲ್ಲಿನ ಪಾಲಕರಲ್ಲಿ ಹೆಚ್ಚು ಅರಿವು ಮೂಡಿಸಬೇಕು. ಜಿಲ್ಲೆಯ ದೇವಸ್ಥಾನ, ಕಲ್ಯಾಣಮಂಟಪಗಳಲ್ಲಿ ಬಾಲ್ಯವಿವಾಹ ತಡೆಯ ಬಗ್ಗೆ ನಾಮಫಲಕ ಅಳವಡಿಸಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net