ಮಕ್ಕಳ ಸಹಾಯವಾಣಿ ಸೇವೆ ಪಡೆಯಿರಿ

ಉಚಿತ ಮಕ್ಕಳ ಸಹಾಯವಾಣಿ-1098 ಉದ್ಘಾಟಿನೆ photo-8 date 05-09-2023
Published on


ಯಾದಗಿರಿ: ಮಕ್ಕಳ ಸಹಾಯವಾಣಿ (1098) ರಾಷ್ಟ್ರ ವ್ಯಾಪಿ ಚಾಲ್ತಿಯಲ್ಲಿರುವ ಉಚಿತ ಮಕ್ಕಳ ರಕ್ಷಣಾ ಸೇವೆಯಾಗಿದೆ. ಪಾಲನೆ ಮತ್ತು ರಕ್ಷಣೆಗೆ ಅವಶ್ಯಕತೆ ಇರುವ ಮಕ್ಕಳಿಗೆ ತುತರ್ು ಸೇವೆಯನ್ನು ಒದಗಿಸುತ್ತದೆ. ಪ್ರತಿಯೊಬ್ಬರೂ ಇದರ ನೆರವು ಪಡೆದುಕೊಳ್ಳುವಂತೆ ಜಿಲ್ಲಾಕಾರಿ ಡಾ.ಸುಶೀಲಾ ಬಿ., ತಿಳಿಸಿದರು.

ಮಂಗಳವಾರ ನಗರದ ಜಿಲ್ಲಾ ಬಾಲಭವನ ಸೊಸೈಟಿ ಕಚೇರಿಯಲ್ಲಿ ಪಾಲನೆ ಮತ್ತು ರಕ್ಷಣೆಗೆ ಅವಶ್ಯಕತೆ ಇರುವ ಮಕ್ಕಳಿಗೆ ತುತರ್ು ಸೇವೆ ಒದಗಿಸುವ 24/7 ಮಕ್ಕಳ ಸಹಾಯವಾಣಿ-1098 ಕೇಂದ್ರ ಉದ್ಘಾಟಿಸಿ ಮಾತನಾಡಿ, ಭಿಕ್ಷಾಟನೆ, ಚಿಂದಿ ಆಯುವ, ಬಾಲ್ಯವಿವಾಹ ಇನ್ನಿತರ ಯಾವುದೇ ಸಂಕಷ್ಟದಲ್ಲಿರುವ ಮಕ್ಕಳು ಸಹಾಯವಾಣಿ ಹಾಗೂ ಇಆರ್ಎಸ್ಎಸ್-112 ಸಂಖ್ಯೆಗೆ ಕರೆ ಮಾಡಬಹುದು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಕಾರಿ ಪ್ರೇಮ್ಮೂತರ್ಿ, ಶಿಶು ಭಿವೃದ್ಧಿ ಯೋಜನಾ ಲಾಲ್ಸಾಬ್ ಪೀರಾಪೂರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಚಂದ್ರಶೇಖರ ಲಿಂಗದಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net