ಮಕ್ಕಳ ಸಹಾಯವಾಣಿ ಸದುಪಯೋಗಪಡಿಸಿಕೊಳ್ಳಿ

12SIRSI1
Published on

ಶಿರಸಿ: ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಪೋಷಣೆಗಾಗಿ ಮಕ್ಕಳ ಸಹಾಯವಾಣಿ-1098 ಕಾರ್ಯ ನಿರ್ವಹಿಸುತ್ತಿದೆ. ಮಕ್ಕಳ ಪಾಲನೆ, ಪೋಷಣೆ ಹಾಗೂ ರಕ್ಷಣೆಗಾಗಿ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಲ್ಲಿನ ಸ್ಕೊಡ್​ವೆಸ್ ಕೇಂದ್ರದ ಮಕ್ಕಳ ಸಹಾಯವಾಣಿ ಕೇಂದ್ರದ ತಾಲೂಕಾ ಸಂಯೋಜಕಿ ದಾನೇಶ್ವರಿ ಹಿರೇಮಠ ತಿಳಿಸಿದ್ದಾರೆ.
ಸ್ಕೊಡ್​ವೆಸ್ ಸಂಸ್ಥೆ ಶಿರಸಿ ಉಪಕೇಂದ್ರದಲ್ಲಿ ಮಕ್ಕಳ ಸಹಾಯವಾಣಿ-1098 ಯೋಜನೆಯು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಪೋಷಣೆಗೆ ಸಂಬಂಧಿಸಿದಂತೆ ಕಳೆದ 2 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯವರೆಗೆ ಮಕ್ಕಳ ರಕ್ಷಣೆಗೆ ಸಹಾಯ ಕೋರಿ ಒಟ್ಟೂ 361 ಕರೆಗಳು ದಾಖಲಾಗಿದ್ದು ಅವುಗಳಿಗೆ ಸೂಕ್ತ ಮಾರ್ಗದರ್ಶನ ನಿಡುವಲ್ಲಿ ಸಹಾಯವಾಣಿ ತಂಡವು ಯಶಸ್ವಿಯಾಗಿದೆ. 18 ವರ್ಷದೊಳಗಿನ ಎಲ್ಲಾ ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಲು ದೇಶ್ಯಾದ್ಯಂತ ಇರುವ ಏಕೈಕ ಸಹಾಯವಾಣಿಯಾಗಿದೆ. ಇದು ಉಚಿತ ಕರೆಯಾಗಿದ್ದು, ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net