ಮಕ್ಕಳ ಸರ್ವತೋಮುಖ ಬೆಳವಣಿಗೆ ಮುಖ್ಯ

All-round development of children is important
All-round development of children is important
Published on

ಲೋಕಾಪುರ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಮತ್ತು ಪಾಲಕರ ಪಾತ್ರ ಅಪಾರ ಎಂದು ಸೂಳಿಭಾವಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಎಂ.ಎಚ್. ಹಡಪದ ಹೇಳಿದರು.

ಸಮೀಪದ ಹೆಬ್ಬಾಳದ ಮುರಾರ್ಜಿ ದೇಸಾಯಿ ವಸತಿ ಶಾಲೆ ಸ್ವಾಗತ ಕಾರ್ಯಕ್ರಮ ಮತ್ತು ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಮಗುವಿನ ಶಿಕ್ಷಣ ಹೆಚ್ಚಿಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆಗಳು ಮತ್ತು ದೃಷ್ಟಿಕೋನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದರು.

ಪ್ರಾಚಾರ್ಯ ವಿಜಯಕುಮಾರ ಮಾತನಾಡಿ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಪರಸ್ಪರ ಸಹಕಾರದ ಮೂಲಕ ಮಗು ತನ್ನ ಅಧ್ಯಯನದಿಂದ ಹೆಚ್ಚಿನದನ್ನು ಪಡೆಯಲು ಸಾಧ್ಯ ಎಂದರು.

ಪಾಲಕರ ಪ್ರತಿನಿಧಿ ಮತ್ತು ಪತ್ರಕರ್ತ ಹಸನ್‌ಡೋಂಗ್ರಿ ಮಹಾಲಿಂಗಪುರ ಮಾತನಾಡಿ, ಹೆಬ್ಬಾಳ ಮುರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ವಸತಿ ಶಾಲೆ ಎಸ್‌ಎಸ್‌ಎಲ್‌ಸಿ ಲಿತಾಂಶದಲ್ಲಿ 100ಕ್ಕೆ 100 ರಷ್ಟು ಲಿತಾಂಶ ಪಡೆದು ಜಿಲ್ಲೆಗೆ ಮಾದರಿ ವಸತಿ ಶಾಲೆಯಾಗಿದೆ ಎಂದರು.

ವಾರ್ಡನ್ ವಿದ್ಯಾವತಿ ಬಿರಾದಾರ, ವಕೀಲ ಶಿವು ಬಾಸುತಕರ ಮಾತನಾಡಿದರು.

ಉಪಪ್ರಾಚಾರ್ಯ ಶಶಿಧರ ಮಾಗಿ, ಶಿಕ್ಷಕರಾದ ರಮೇಶ ಲಮಾಣಿ, ಎಂ.ಐ. ಕೊಟೆಪ್ಪಗೋಳ, ಗೀತಾ ಹುಲಗಜ್ಜೆ, ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ ಗುರಡ್ಡಿ, ಎ್ಡಿಎ ಗೋವಿಂದಪ್ಪ ಮಲಘಾಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net