

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂವು ಕವಿ ಬಿ.ಕೆ. ಹೊಂಗಲ ದತ್ತಿ ನಿಮಿತ್ತ ಏ. 20ರಂದು ಸಂಜೆ 6 ಗಂಟೆಗೆ ಸಂದ ಸಭಾಭವನದಲ್ಲಿ ಉಪನ್ಯಾಸ ಹಾಗೂ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ&2024 ಪ್ರದಾನ ಸಮಾರಂಭ ಏರ್ಪಡಿಸಿದೆ.
2024ನೇ ವರ್ಷದ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿಯನ್ನು ನಗರದ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಅವರಿಗೆ ಸಂದ ಅಧ್ಯ ಚಂದ್ರಕಾಂತ ಬೆಲ್ಲದ ಪ್ರಶಸ್ತಿ ಪ್ರದಾನ ಮಾಡುವರು. ಡಾ. ಬಸವರಾಜ ದೇವರು ಸಾನ್ನಿಧ್ಯ ವಹಿಸುವರು. ಮಕ್ಕಳ ಸಾಹಿತ್ಯ ಕುರಿತು ಕುರುಬಗಟ್ಟಿ ಸರ್ಕಾರಿ ಪ್ರೌಢ ಶಾಲೆ ಅಧ್ಯಾಪಕ ಶ್ರೀಧರ ಗಸ್ತಿ ಉಪನ್ಯಾಸ ನೀಡುವರು. ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಹಿರಿಯ ಸಾಹಿತಿ ಡಾ. ಆರ್.ಬಿ. ಚಿಲುಮಿ ಆಗಮಿಸುವರು. ಡಾ. ಮಾರ್ಕಂಡೇಯ ದೊಡಮನಿ ವಿಶೇಷ ಆಮಂತ್ರಿತರಾಗಿ ಆಗಮಿಸುವರು. ಹಿರಿಯ ಮಕ್ಕಳ ಸಾಹಿತಿ ಬಿ.ಕೆ. ಹೊಂಗಲ ಗೌರವ ಉಪಸ್ಥಿತರಿರುವರು.
ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾಥಿರ್ಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂದ ಪ್ರಧಾನ ಕಾರ್ಯದಶಿರ್ ಶಂಕರ ಹಲಗತ್ತಿ ತಿಳಿಸಿದ್ದಾರೆ.