ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ, ಕಾರ್ಮಿಕರಿಗೆ ಸಲಹೆ

CTD 28 KANNDA--05
Published on

ಚಿತ್ರದುರ್ಗ: ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಜತೆಗೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವಂತೆ, ಕರ್ನಾಟಕ ಕೊಳಗೇರಿ ಸಂಯುಕ್ತ ಸಂಘಟನೆ ಜಿಲ್ಲಾ ಗೌರವಾಧ್ಯಕ್ಷ, ವಕೀಲ ಬಿ.ಕೆ.ರಹಮತ್‌ಉಲ್ಲಾ ಕಾರ್ಮಿಕರಿಗೆ ಸಲಹೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಕರ್ನಾಟಕ ಕೊಳಗೇರಿ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಮತ್ತು ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕೊಳಗೇರಿ ನಿವಾಸಿಗಳು,ನಗರದ ಬಡವರಿಗೆ ಹೊದಿಕೆ ವಿತರಣಾ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ರಾಜಕಾರಣಿಗಳು, ಸಾಹಿತಿಗಳು, ಬರಹಗಾರರು, ವಕೀಲರು ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆದವರಾಗಿದ್ದಾರೆ. ನಿಗದಿತ ವಯೋ ಮಿತಿ ಬಳಿಕವೇ ಮಕ್ಕಳ ಮದುವೆ ಮಾಡುವಂತೆ ಪಾಲಕರಿಗೆ ಮನವಿ ಮಾಡಿದರು. ವಕೀಲೆ ದಿಲ್‌ಶಾದ್ ಉನ್ನೀಸಾ ಅವರು ಮಾತನಾಡಿ, ಮೇ ಲು-ಕೀಳು ಎಂಬ ಭಾವನೆ ತೊರೆದು ಪ್ರತಿಯೊಬ್ಬರು ಸಮಾನತೆಯಿಂದ ಬದುಕು ನಡೆಸಿದಾಗ, ಸಮ-ಸಮಾಜದ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಕರ್ನಾಟಕ ಶಾಂತಿ ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ, ಕೊಳಗೇರಿ ನಿವಾಸಿಗಳಿಗೆ ನಿವೇಶನ, ಮ ನೆ ಹಾಗೂ ಮೂಲ ಸೌಕರ್ಯಗಳ ಸರ್ಕಾರ ಕಲ್ಪಿಸಬೇಕಿದೆ. ಕಾರ್ಮಿಕರು ಮತ್ತು ಬಡಜನರ ಪರ ಕಾರ್ಯಕ್ರಮಗಳನ್ನು ಸರ್ಕಾರಗಳು ರೂಪಿಸಿದಾಗ ಕೊಳಗೇರಿಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಚಿತ್ರದುರ್ಗ ಮಹಿಳಾ ಸಮಾಜದ ಅಧ್ಯಕ್ಷೆ ಮೋಕ್ಷಾರುದ್ರಸ್ವಾಮಿ, ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ ಮಾತನಾಡಿ ದರು. ಅಕಾಡೆಮಿ ಅಧ್ಯಕ್ಷ ಮೊಹಮದ್‌ಹನೀಫ್ ನಿರೂಪಿಸಿದರು. ಇನ್ನರ್‌ವೀಲ್ ಕ್ಲಬ್ ಕಾರ‌್ಯದರ್ಶಿ ಲತಾಉಮೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net