ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ನೀಡಿ

IMG_20221229_145444
ಸುಂಟಿಕೊಪ್ಪ ಶಾಂತಿನಿಕೇತನ ವಿದ್ಯಾಸಂಸ್ಥೆ ವಾರ್ಷಿಕೋತ್ಸವನ್ನು ಗಣ್ಯರು ಉದ್ಘಾಟಿಸಿದರು. ಎಂ.ಈಶ್ವರ ಭಟ್, ಸಿ.ಎ.ಉತ್ತಯ್ಯ, ಸಿ.ಎಂ. ರಂಜಿತ್ ಕಾರ್ಯಪ್ಪ, ಎಂ.ಎನ್ ಹರೀಶ್ ಇತರರು ಇದ್ದರು.
Published on

ಸುಂಟಿಕೊಪ್ಪ: ಶಾಲಾ ಮಟ್ಟದಲ್ಲಿಯೇ ಸಾಧನೆಗೆ ಅವಶ್ಯಕ ಜ್ಞಾನ ಪಡೆದುಕೊಳ್ಳಲು ಅಡಿಪಾಯ ಹಾಕಬೇಕು ಎಂದು ಲೆಕ್ಕಪರಿಶೋಧಕ ಎಂ.ಈಶ್ವರ ಭಟ್ ಹೇಳಿದರು.
ಸಮೀಪದ ಕೊಡಗರಹಳ್ಳಿ ಶಾಂತಿನಿಕೇತನ ವಿದ್ಯಾಸಂಸ್ಥೆಯಲ್ಲಿ ಗುರುವಾರ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಮತ್ತುವ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ವಿದ್ಯಾಭ್ಯಾಸದ ಜೊತೆಯಲ್ಲಿ ಜೀವನದ ಎಲ್ಲ ಕ್ಷೇತ್ರದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ನೀಡಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹಂತಹಂತವಾಗಿ ಜಾರಿಗೆ ಬರುತ್ತಿದ್ದು, ಇದರಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲದೆ ಕೌಶಲ ಪೂರ್ಣವಾದ ವಿದ್ಯಾಭ್ಯಾಸವನ್ನು ಮಕ್ಕಳಿಗೆ ನೀಡಲು ಅವಕಾಶವಿದೆ ಎಂದು ಹೇಳಿದರು.
ದೇಶದ ಜನಸಂಖ್ಯೆಯ ಶೇ. 65ರಷ್ಟು ಮಂದಿ 29- 35 ವಯಸ್ಸಿನವರಾಗಿದ್ದು, ಈ ಯುವ ಜನಾಂಗವನ್ನು ಸರಿಯಾದ ದಾರಿಯಲ್ಲಿ ನಡೆಸಿದರೆ ಭಾರತ ವಿಶ್ವ ಗುರುವಾಗುತ್ತದೆ. ಮಾನವನ ಬುದ್ಧಿಶಕ್ತಿ ಒಂದು ಗುಪ್ತನಿಧಿಯಂತಿದ್ದು, ಅದನ್ನು ಶೋಧಿಸಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಂ.ಎಸ್ಸಿ. ಮನಶಾಸ್ತ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಥಮ ರ‌್ಯಾಂಕ್ ಪಡೆದ ಶಾಲೆಯ ಹಳೆಯ ವಿದ್ಯಾರ್ಥಿನಿ ಎ.ಸಿ.ರುಷಾಲಿ ಚಮಗಪ್ಪ ಅವರನ್ನು ಸನ್ಮಾನಿಸಲಾಯಿತು. ಭಾರತೀಯ ಎಜುಕೇಶನ್ ಸರ್ವೀಸ್ ಟ್ರಸ್ಟ್ ಅಧ್ಯಕ್ಷ ಸಿ.ಎ.ಉತ್ತಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಿ.ಎಂ. ರಂಜಿತ್ ಕಾರ್ಯಪ್ಪ, ಖಜಾಂಚಿ ಎಂ.ಎನ್ ಹರೀಶ್, ಶಾಲಾ ಮುಖ್ಯೋಪಾದ್ಯಾಯಿನಿ ಮೇರಿ ಫಾತೀಮಾ, ಟ್ರಸ್ಟಿಗಳಾದ ಕೆ.ಎ.ಚಂಗಪ್ಪ, ಬಿ.ಡಿ.ಸುಭಾಷ್, ಅನಿಲ್ ಪೊನ್ನಪ್ಪ, ಅಜಿತ್ ಅಪ್ಪಚ್ಚು, ಸಂಜಯ್ ಎಸ್.ಜೆ., ಕೆ.ಎ.ಚಂಗಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net