ಮಕ್ಕಳ ವ್ಯಕ್ತಿತ್ವ ರೂಪಿಸುವ ಕಾರ್ಯವಾಗಲಿ

19-8 ctpr 1
ಚಿತ್ತಾಪುರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧೆಡೆ ವರ್ಗಾವಣೆಯಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶ್ರೀ ಸೋಮಶೇಖರ ಶಿವಾಚಾರ್ಯರು, ಸಿದ್ದವೀರಯ್ಯ ರುದ್ನೂರ, ಬಸವರಾಜ ಬಳೂಂಡಗಿ, ಶಿವಾನಂದ ನಾಲವಾರ, ಮಲ್ಲಿಕಾರ್ಜುನ ಸೇಡಂ ಇತರರಿದ್ದರು.
Published on

ಚಿತ್ತಾಪುರ: ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ವ್ಯಕ್ತಿತ್ವ ರೂಪಿಸುವ ಕಾರ್ಯ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಸಲಹೆ ನೀಡಿದರು.

ಕಂಬಳೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಾಥಮಿಕ ಶಿಕ್ಷಕರ ಸಂಘ ಶನಿವಾರ ಹಮ್ಮಿಕೊಂಡಿದ್ದ ೨೦೨೨-೨೩ರಲ್ಲಿ ವರ್ಗಾವಣೆಗೊಂಡ ಮತ್ತು ಹೊಸದಾಗಿ ತಾಲೂಕಿಗೆ ಆಗಮಿಸಿದ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳು ಶಿಕ್ಷಕರನ್ನು ಅನುಕರಣೆ ಮಾಡುತ್ತಾರೆ. ಆದ್ದರಿಂದ ಶಿಕ್ಷಕರು ಸಮಯ, ಶಿಸ್ತು ಅಳವಡಿಸಿಕೊಳ್ಳಬೇಕು. ವೃತ್ತಿ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಶಾಲೆಗಳು ಬದಲಾಗಬೇಕಾದರೆ ಮೊದಲು ಶಿಕ್ಷಕರು ಬದಲಾಗಬೇಕು ಎಂದು ಕಿವಿಮಾತು ಹೇಳಿದರು.

ಶ್ರೀ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ, ರವಿತೇಜ, ಸಿಂಗರಾಜ, ನಿರ್ಮಲಾ ಮಾತನಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ದೈಹಿಕ ಶಿಕ್ಷಣಾಧಿಕಾರಿ ದೇವಿಂದ್ರರೆಡ್ಡಿ ದುಗನೂರ, ವೆಂಕಟರೆಡ್ಡಿ, ಶ್ರೀಧರ ರಾಠೋಡ್, ನಾಗಪ್ಪ ನೆಲೋಗಿ, ಮಹ್ಮದ್ ಜಾವಿದ್, ರೇವಣಸಿದ್ದಪ್ಪ ರೋಣದ, ಗಂಗಾಧರ, ಹುಸೇನ್ ಪಾಶಾ, ಯುಸೂಫ್ ಖಾನ್, ನಟರಾಜ ಇತರರಿದ್ದರು.

ಮಲ್ಲಿಕಾರ್ಜುನ ಪ್ರಾರ್ಥನೆ ಗೀತೆ ಹಾಡಿದರು. ಸ್ವರ್ಣಲತಾರೆಡ್ಡಿ ದುಗನೂರ ಸ್ವಾಗತಿಸಿದರು. ಅಬ್ದುಲ್ ಸಲೀಂ ಪ್ಯಾರೆ ನಿರೂಪಣೆ ಮಾಡಿದರು. ೧೫೦ಕ್ಕೂ ಹೆಚ್ಚು ಶಿಕ್ಷಕರನ್ನು ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net