ಮಕ್ಕಳ ವಿಕಾಸಕ್ಕೆ ನೆಹರು ಕೊಡುಗೆ ಅಪಾರ

14Rajesh5
Published on

ಚಾಮರಾಜನಗರ: ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮಕ್ಕಳ ವಿಕಾಸಕ್ಕಾಗಿ ಹಲವು ಕಾರ್ಯಕ್ರಮ ರೂಪಿಸಿದರು ಎಂದು ಹಿರಿಯ ಉಪನ್ಯಾಸಕ ಮೂರ್ತಿ ಹೇಳಿದರು.

ತಾಲೂಕಿನ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನೆಹರು ಅವರ ಜನ್ಮದಿನದಂದು ಮಕ್ಕಳ ದಿನಾಚರಣೆ ಮಾಡುವ ಮೂಲಕ ವಿಕಾಸಕ್ಕೆ ನಾಂದಿ ಹಾಡಿದರು ಎಂದರು.

ಇತಿಹಾಸ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಮಕ್ಕಳು ದೇವರ ಸಮಾನ. ಮಕ್ಕಳಲ್ಲಿ ಮುಗ್ಧತೆ ,ಪ್ರೀತಿ, ಕರುಣೆ, ವಾತ್ಸಲ್ಯ ಗುಣಗಳು ಇರುತ್ತವೆ. ಮಕ್ಕಳ ಅಭಿವೃದ್ಧಿಯ ಮೂಲಕ ಸದೃಢ ರಾಷ್ಟ್ರವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಅರ್ಥಶಾಸ್ತ್ರ ಉಪನ್ಯಾಸಕ ಬಸವಣ್ಣ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ಬೇಬಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಉಪನ್ಯಾಸಕ ರಮೇಶ್ ಕುವೆಂಪು ಗೀತೆಗಳನ್ನು ಹಾಡಿ ರಂಜಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಸಾದ್, ಶ್ರೀನಿವಾಸ್, ರಾಧಾ, ಸಂಜನಾ, ಗೀತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net