ಮಕ್ಕಳ ಮೇಲಿರಲಿ ಪಾಲಕರ ನಿಗಾ

santpur
Published on

ಔರಾದ್: ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ಪಾಲಕರು ನಿಗಾ ಇರಿಸಬೇಕು. ಇದರಿಂದ ಅವರು ಸರಿಯಾದ ದಾರಿಯಲ್ಲಿ ಸಾಗಲು ಸಾಧ್ಯ ಎಂದು ಉಪನ್ಯಾಸಕ ನಾಗಯ್ಯ ಸ್ವಾಮಿ ಮಸ್ಕಲ್ ಹೇಳಿದರು.

ತಾಲೂಕಿನ ಸಂತಪುರ ಗ್ರಾಮದ ಸುಭಾಷಚಂದ್ರಭೋಸ್ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ ಮಕ್ಕಳ ಪಾಲಕರ ಸಭೆ ಹಾಗೂ ನಿವೃತ್ತಿಯಾದ ಇಂಗ್ಲಿಷ್ ಶಿಕ್ಷಕಿ ಚಂದ್ರಮತಿ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಸಾಧನೆಯಲ್ಲಿ ಪಾಲಕರ ಕರ್ತವ್ಯ ಅಪಾರವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಚಂದ್ರಮತಿ ಮಾತನಾಡಿದರು. ಮುಖ್ಯ ಗುರು ಶಿವರಾಜ ಜುಲಂಡೆ, ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಮನೋಹರ ಬಿರಾದಾರ, ಶಿವಾಜಿರಾವ ಬೋರಾಳೆ, ಶಾಲಿವಾನ ಪನ್ನಾಳೆ, ನಾಗಯ್ಯ ಸ್ವಾಮಿ, ಮನೋಹರ ಬಿರಾದಾರ, ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಶ್ರೀಪತಿ ಖಟಕೆ, ಜಗನ್ನಾಥ, ಸುರೇಖಾ, ಸಂಗೀತಾ, ನಂದಾದೀಪ ಬೋರಾಳೆ ಇತರರಿದ್ದರು. ಶಿಕ್ಷಕ ಗುರುನಾಥ ಬುಟ್ಟೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net