ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ ಪೂರಕ

ctd ....2 ac
Published on

ಚಿತ್ರದುರ್ಗ: ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರಗಳು ಪೂರಕವೆಂದು ಎಸಿ ಮೆಹಬೂಬ್ ಜಿಲಾನಿ ಖುರೇಷಿ ಹೇಳಿದರು. ರಾಜ್ಯಬಾಲಭವನ ಸೊಸೈಟಿ, ಜಿಪಂ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಸಹಯೋಗದಲ್ಲಿ 9-16ವರ್ಷದವೊಳಗಿನ ಮಕ್ಕಳಿಗೆ

ಮೇ 12ರಿಂದ 15 ದಿನಗಳ ಕಾಲ ನಗರದ ಜಿಲ್ಲಾ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಿಣ ಕ್ರೀಡೆಗಳು,ಈಜು,ಆಟೋಟಗಳ ಮೂಲಕ ಸದೃಢರಾಗುತ್ತಿದ್ದೇವು. ಆದರೆ ಇಂದು ಮಕ್ಕಳು ಮೊಬೈಲ್ ಮತ್ತು ಟಿವಿ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಶಿಬಿರದಲ್ಲಿ ಯೋಗ, ಧ್ಯಾನ,ಶ್ಲೋಕ,ಪಾರಾಯಣ ಚಿತ್ರಕಲೆ, ಕರಕುಶಲತೆ, ಅಭಾಕಾಸ್, ಸಮೂಹ ನೃತ್ಯ, ಸಂಗೀತ, ಮಾತನಾಡುವ ಗೊಂಬೆ, ಗಾಳಿಪಟ ತಯಾರಿಕೆ, ಅಭಿನಯ ಮತ್ತಿತರ ಕ್ರಿಯಾಶೀಲ ಚಟುವಟಿಕೆಗಳು ಮಕ್ಕಳ ಮನೋವಿಕಾಸಕ್ಕೆ ಸಹಕಾರಿ ಆಗುತ್ತವೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಪ್ರಾಸ್ತಾವಿಕ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ರಾಜ್ಯಬಾಲಭವನ ಸೊಸೈಟಿಯಿಂದ ಶಿಬಿರ ಆಯೋಜಿಸಲಾಗಿತ್ತು. 103 ಮಕ್ಕಳು ನೋಂದಣಿ ಆಗಿದ್ದರು ಎಂದರು. ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿದರು.

ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್.ಪವಿತ್ರಾ,ಜಿಲ್ಲಾ ಮಕ್ಕಳ ರಕಣಾಧಿಕಾರಿ ಸಿ.ಸವಿತಾ,ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಂ.ವೀಣಾ,ಸಂಪನ್ಮೂಲ ವ್ಯಕ್ತಿಗಳಾದ ಎಸ್.ಕುಮಾರಸ್ವಾಮಿ,ಎಚ್.ತಿಪ್ಪೇರುದ್ರಪ್ಪ, ಮಂ ಜುಳಾಅವನೂರು,ಬಿ.ನಿರ್ಮಲಾ ಇದ್ದರು. ಡಿ.ಕುಮಾರ ಕಾರ‌್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net