ಮಕ್ಕಳ ಭವಿಷ್ಯದಲ್ಲಿ ಶಿಕ್ಷಕರ ಪಾತ್ರ ಪ್ರಮುಖ

16BK1
ನಾರಾಯಣಪುರದಲ್ಲಿ ಭಾನುವಾರ ಆಯೋಜಿಸಿದ್ದ ಜವಾಹರ ನವೋದಯ ವಿದ್ಯಾಲಯದ ೧೦ನೇ ಬ್ಯಾಚ್ ವಿದ್ಯಾರ್ಥಿಗಳ ಮಿಲನ ನೆನಪಿನಂಗಳ ಕಾರ್ಯಕ್ರಮವನ್ನು ಸಹಾಯಕ ಆಯುಕ್ತ ಮುಕುಲ್ ಜೈನ್ ಉದ್ಘಾಟಿಸಿದರು. ತಹಸೀಲ್ದಾರ್ ದತ್ತಾತ್ರೇಯ ಗಾದಾ, ಕೆ.ಸಾಗರಿಕಾ, ಪಿ.ಅರವಿಂದ, ಡಾ.ಭಾವನಾ ಋಷಿ ಇದ್ದರು.
Published on

ಬಸವಕಲ್ಯಾಣ: ಉತ್ತಮ ಶಿಕ್ಷಣ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಹಾಯಕ ಆಯುಕ್ತ ಮುಕುಲ್ ಜೈನ್ ಹೇಳಿದರು.

ನಾರಾಯಣಪುರದ ಜವಾಹರ ನವೋದಯ ವಿದ್ಯಾಲಯದದಲ್ಲಿ ಭಾನುವಾರ ಆಯೋಜಿಸಿದ್ದ ೧೦ನೇ ಬ್ಯಾಚ್ ವಿದ್ಯಾರ್ಥಿಗಳ ಮಿಲನ ನೆನಪಿನಂಗಳ ಕಾರ್ಯಕ್ರಮ ಉದ್ಘಾಟಿಸಿದ ಅವರು, ಶಿಕ್ಷಕರಿಂದಲೇ ವಿದ್ಯಾರ್ಥಿ ಬದುಕು ಮತ್ತು ಭವಿಷ್ಯದಲ್ಲಿ ಬದಲಾವಣೆ ಕಾಣಬಹುದಾಗಿದೆ ಎಂದರು.

ವಿದ್ಯಾರ್ಥಿಗಳು ಸಮಯ, ಸೌಲಭ್ಯಗಳ ಸದುಪಯೋಗ ಮಾಡಿಕೊಂಡು ಶ್ರಮವಹಿಸಿ ಅಭ್ಯಾಸ ಮಾಡಿದಾಗಲೇ ಗುರಿ ಸಾಧಿಸಬಹುದು. ಜೀವನದಲ್ಲಿ ಸಾಧನೆ ಜತೆಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ತಹಸೀಲ್ದಾರ್ ದತ್ತಾತ್ರೇಯ ಗಾದಾ ಮಾತನಾಡಿ, ವಿಜ್ಞಾನಿ, ಇಂಜಿನಿಯರ್, ಡಾಕ್ಟರ್ ಸೇರಿ ಎಲ್ಲ ವರ್ಗದವರನ್ನು ರೂಪಿಸುವ ರೂವಾರಿಗಳೇ ಶಿಕ್ಷಕರು. ಯಾವುದೇ ಫಲಾಪೇಕ್ಷೆ ಇಲ್ಲದೆ ಅವರು ಕಾಳಜಿ ಮತ್ತು ಕರ್ತವ್ಯನಿಷ್ಠೆಯಿಂದ ಅಕ್ಷರ ಜ್ಞಾನದ ಧಾರೆ ಎರೆಯುತ್ತಾರೆ. ನವೋದಯದಲ್ಲಿ ದೊರೆತ ಗುಣಮಟ್ಟದ ಶಿಕ್ಷಣದಿಂದಲೇ ನಾವೆಲ್ಲರೂ ಉನ್ನತ ಗುರಿ ಸಾಧಿಸಲು ಸಾಧ್ಯವಾಯಿತು ಎಂದರು.

ಹೈದರಾಬಾದ್ ಪ್ರಾದೇಶಿಕ ಕೇಂದ್ರ ನವೋದಯ ವಿದ್ಯಾಲಯ ಸಮಿತಿ ಸಹಾಯಕ ಆಯುಕ್ತೆ ಕೆ.ಸಾಗರಿಕಾ ಮಾತನಾಡಿ, ನೆನಪಿನಂಗಳ ಮೂಲಕ ಹಳೆಯ ವಿದ್ಯಾರ್ಥಿಗಳು ಶಿಕ್ಷಕರ ನೆನಪಿಸುವ ಈ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ. ಎಷ್ಟೇ ಉನ್ನತ ಸ್ಥಾನಮಾನದಲ್ಲಿದ್ದರೂ ತಾನು ಓದಿದ ಶಾಲೆ, ಕಲಿಸಿದ ಶಿಕ್ಷಕರು ಹಾಗೂ ಬಾಲ್ಯದ ದಿನಗಳನ್ನು ಸ್ಮರಿಸುವುದನ್ನು ಮರೆಯಕೂಡದು ಎಂದು ಸಲಹೆ ನೀಡಿದರು.

ಪ್ರಭಾರಿ ಪ್ರಾಚಾರ್ಯ ಪಿ.ಅರವಿಂದ, ಉಪ ಪ್ರಾಚಾರ್ಯೆ ಡಾ.ಭಾವನಾ ಋಷಿ, ಡಾ.ರಮೇಶ, ಡಾ.ಪೃಥ್ವಿರಾಜ ಕಾಂಬಳೆ, ಡಾ.ಮಹೇಶಕುಮಾರ, ಅಂಜಲಿರೆಡ್ಡಿ, ಡಾ.ಜ್ಯೋತಿ ಆರ್.ಸಿ., ಜ್ಯೋತಿ ಎಸ್.ಬಿ., ತಂಗವೇಲು, ವೈಶಾಲಿ, ಜಯಶ್ರೀ ಬಿ., ಮುರಳಿಧರ, ಗೌರೀಶ, ಸತೀಶ ಪಿ.ಕೆ., ಬಸವಕುಮಾರ, ಶಿವಾನಂದ, ವಿಜಯಕುಮಾರ ಎನ್.ಎಂ., ವಿಜಯಕುಮಾರ ಆರ್.ಯು., ಡಾ.ನಾಗನಾಥ, ಪ್ರಶಾಂತ ಮಠಪತಿ, ಕಿರಣ ಪಾಟೀಲ್ ಉಪಸ್ಥಿತರಿದ್ದರು. ನಾಗಶೇನ ಸ್ವಾಗತಿಸಿದರು. ಸೋಮನಾಥ ವಂದಿಸಿದರು. ಮುರಳಿ ನಿರೂಪಣೆ ಮಾಡಿದರು.

ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲಿದೆ. ಜೀವನದಲ್ಲಿ ಸಾಧನೆಗೆ ಉತ್ತಮ ಆರೋಗ್ಯವೂ ಮುಖ್ಯ. ಹೀಗಾಗಿ ಆರೋಗ್ಯ ಕಾಳಜಿಯೊಂದಿಗೆ ಶ್ರಮವಹಿಸಿ ಅಭ್ಯಸಿಸಬೇಕು. ಗುರಿ ತಲುಪಿ ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಪಾಲಕರ ಕನಸು ಸಾಕಾರ ಮಾಡಬೇಕು.

| ಕೆ.ಸಾಗರಿಕಾ ಸಹಾಯಕ ಆಯುಕ್ತೆ, ನವೋದಯ ವಿದ್ಯಾಲಯ ಸಮಿತಿ ಪ್ರಾದೇಶಿಕ ಕೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net