

ಚಿತ್ರದುರ್ಗ: ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಹೊಣೆ ಪಾಲಕರು,ಶಿಕ್ಷಕರ ಮೇಲಿದೆ ಎಂದು ಸೀಬಾರ-ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಕಾರ‌್ಯದರ್ಶಿ ಎಂ.ನೀಲಕಂಠದೇವರು ಹೇಳಿದರು. ಸಂಸ್ಥೆಯಲ್ಲಿ ಗುರುವಾರ ಮಾಜಿ ಪ್ರಧಾನಿ ಜವಾಹರಲಾಲ್‌ನೆಹರು ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಕ್ಕಳ ಮನಸ್ಸೆಂಬುದು ಬಿಳಿ ಹಾಳೆ ಇ ದ್ದಂತೆ. ಅದರ ಮೇಲೆ ಏನು ಬರೆಯುತ್ತವೆಯೋ ಅದು ಗೋಚರಿಸುತ್ತದೆ. ಆದ್ದರಿಂದ ಮಕ್ಕಳನ್ನು ಪ್ರೀತಿ,ವಿಶ್ವಾಸದಿಂದ ನಡೆಸಿಕೊಳ್ಳುವ ಜ ವಾಬ್ದಾರಿ ನಮ್ಮಗಳ ಮೇಲಿದೆ ಎಂದರು.
ಸಂಸ್ಥೆ ಪ್ರೌಢಶಾಲೆ ಮುಖ್ಯಶಿಕ್ಷಕಜಿ.ಆರ್.ಚನ್ನಬಸಪ್ಪ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಬಿ.ಜಿ.ಶಿವರುದ್ರಯ್ಯ,ಶಿಕ್ಷ ಣ ಸಂಯೋಜಕರಾದ ಎಂ.ದೀಪಾ,ಎಂ.ಜಿ.ಕುಮಾರಿ,ವೇದಾವತಿ,ವಿದ್ಯಾರ್ಥಿ ಸಂಘದ ಕಾರ‌್ಯದರ್ಶಿಗಳಾದ ನಿಖಿಲ್,ನಂದನ್‌ಕುಮಾರ್, ಎ.ಪವನ್,ಎಸ್.ಅಭಿರಾಜ್,ಸಾನಿಕಾ,ಸ್ಫೂರ್ತಿ ಇತರರು ಇದ್ದರು.
ನಿಸರ್ಗ ಯೋಗ ಕೇಂದ್ರ
ಚಿತ್ರದುರ್ಗ ಐಯುಡಿಪಿ ನಿಸರ್ಗ ಯೋಗ ಕೇಂದ್ರದಿಂದ ಗಾಂಧಿನಗರದ ಅಂಗನವಾಡಿಯಲ್ಲಿ ಗುರುವಾರ ಏರ್ಪಡಿಸಿದ್ದ ಮಕ್ಕಳ ದಿ ನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ‌್ಯಕ್ರಮವನ್ನು ಕೇಂದ್ರದ ಅಧ್ಯಕ್ಷ ರಾಮಪ್ಪ ಉದ್ಘಾಟಿಸಿದರು. ಪ್ರಧಾನ ಕಾರ‌್ಯದರ್ಶಿ ಎಸ್.ಸಿದ್ದ ರಾಜು,ಶಬರಿ,ಮಂಜುಳಾ ಜಯಣ್ಣ,ವಾಸವಿ,ದಿವ್ಯಾ,ರಂಗಮ್ಮ,ಸುಧಾ, ಚಂದ್ರಿಕಾ,ರಾಜಮ್ಮ,ಪ್ರೇಮ,ಸಿದ್ದಮ್ಮ ಮತ್ತಿತರರು ಇದ್ದರು.
----