

ಚಿತ್ರದುರ್ಗ: ರಾಜ್ಯಬಾಲಭವನ ಸೊಸೈಟಿ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮೇ 12ರಿಂದ 26ರವರೆಗೆ 5 ರಿಂದ16 ವರ್ಷದ ಮಕ್ಕಳಿಗೆ ಜಿಲ್ಲಾ ಮಟ್ಟದ ಮಕ್ಕಳ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ. ಯೋಗ, ಧ್ಯಾನ, ಚಿತ್ರಕಲೆ, ಕಸದಿಂದ ರಸ, ಜೇಡಿ ಮಣ್ಣಿನ ಕಲೆ, ಮೆಹಂದಿ, ಕರಕುಶಲತೆ, ಸಮೂಹ ನೃತ್ಯ, ಸಂಗೀತ, ಮಾತನಾಡುವ ಗೊಂಬೆ ತರಬೇತಿ ಹಾಗೂ ಆಹ್ವಾನಿತ ಅಥಿತಿಗಳಿಂದ ಉಪನ್ಯಾಸವಿರುತ್ತದೆ. ಆಸಕ್ತ ಪಾಲಕರು,ಮಕ್ಕಳು 9ರೊಳಗೆ ಹೆಸರು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಮಹಿ ಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಹಾಗೂ ಜಿಲ್ಲಾ ಬಾಲಭವನ ಸಮಿತಿ ಕಾರ್ಯದರ್ಶಿ ಕಚೇರಿಗೆ ಭೇಟಿ ನೀಡಬಹುದು.