ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ

14TLR1
Published on

ತಲ್ಲೂರ: ಮಕ್ಕಳಲ್ಲಿನ ಪ್ರತಿಭೆ ಹೊರತರಲು ಕಲಿಕಾ ಹಬ್ಬ ಸೂಕ್ತ ವೇದಿಕೆ ಎಂದು ಸವದತ್ತಿ ಬಿಆರ್‌ಪಿ ವಿ.ಸಿ. ಹಿರೇಮಠ ಹೇಳಿದರು.

ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಸಭಾ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮೂಹ ಸಂಪನ್ಮೂಲ ಕೇಂದ್ರ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿಆರ್‌ಪಿ ಗುರುದೇವಿ ಮಲಕನ್ನವರ ಮಾತನಾಡಿ, ಶಾಲೆಯ ಶೈಕ್ಷಣಿಕ ಪ್ರಗತಿಗೆ ಪಾಲಕರ ಸಹಕಾರ ಅತ್ಯವಶ್ಯ ಎಂದರು.

ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ಸವದತ್ತಿ ಬಿಆರ್‌ಪಿ ರತ್ನಾ ಸೇತಸನದಿ, ಎಸ್‌ಡಿಎಂಸಿ ಸದಸ್ಯ ರವಿ ಗಾಣಿಗೇರ, ಹುಸೇನಬಿ ಕುದರಿ, ಮುಖ್ಯಶಿಕ್ಷಕ ಡಿ.ಡಿ. ಭೋವಿ, ಶಿವಾನಂದ ಅಣ್ಣಿಗೇರಿ, ಸೈದುಸಾಬ್ ಜಂಬಗಿ, ವಿಜಯ ಮರಡಿ, ಲೋಕನಾಥ ಪೂಜೇರ, ಆನಂದ ಲಕ್ಕನ್ನವರ, ಎಚ್.ವೈ. ಗೌಡರ, ರಾಜು ದುಂಡನಕೊಪ್ಪ, ಎಸ್.ಎಂ.ಮಾಳೈನವರ, ಎಮ್.ಎ.ಬಸರಿಮರದ, ಎಸ್.ಎಂ.ಹಂಜಿ, ಎಸ್.ಎಫ್.ಮುರಗನ್ನವರ, ವಿಜಯಲಕ್ಷ್ಮೀ ಕಳಸನ್ನವರ, ಆರ್.ಎಚ್.ಅತ್ತಾರ, ಲಕ್ಷ್ಮೀ ರಾಯನ್ನವರ, ಅಶ್ವಿನಿ ಹಿರೇಮಠ, ಪ್ರೀತಿ ಪಾಟೀಲ, ಪುಷ್ಪಾ ಬಳ್ಳಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net