ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ

23blk2
Published on

ಭಾಲ್ಕಿ: ಮಕ್ಕಳಲ್ಲಿ ಅದ್ಭುತ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಗುರುಪ್ರಸಾದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಮಾತನಾಡಿದರು.

ಮಕ್ಕಳಲ್ಲಿ ಪ್ರತಿಭೆ ಅಡಗಿದ್ದು, ಹೊರಹೊಮ್ಮಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿವೆ. ಬಡವರು, ರೈತರು, ಕೂಲಿಕಾರ್ಮಿಕರ ಮಕ್ಕಳು ಉತ್ತಮ ಸಾಧನೆ ಮಾಡಿದ್ದು, ಹೆಮ್ಮೆ ಎಂದರು.

ಪ್ರತಿಭೆಗಳಿಗೆ ಪ್ರಶಸ್ತಿ ಪತ್ರ: ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ವಿದ್ಯಾರ್ಥಿನಿಯರಾದ ನಂದಿನಿ, ಶಿವಾನಿ, ಸೃಷ್ಟಿ, ಜುನೇದ, ವೀರೇಶ, ಚನ್ನವೀರ, ಸುಶ್ಮೀತಾ, ಶ್ರದ್ಧಾ, ಮುಸ್ತಾಕ, ಶಿವಾನಂದ, ಅಸ್ಲಂ, ಶ್ರದ್ಧಾ, ಅಂಕಿತಾ, ರೇವಣಸಿದ್ದ, ಲಕ್ಷಿö್ಮ, ವಿಶ್ವ, ಐಶ್ವರ್ಯ, ಹುಲೆಪ್ಪ, ಅಮಿತ, ನಾಗರಾಜ, ಸುಮಿತ, ಕರಣ ಮತ್ತು ಅಂಕಿತಾ ಅವರಿಗೆ ಉಭಯ ಶ್ರೀಗಳು ಪ್ರಶಸ್ತಿ ಪತ್ರ ನೀಡಿ ಆಶೀರ್ವದಿಸಿದರು.

ಮುಖ್ಯಗುರು ಬಾಬು ಬೆಲ್ದಾಳ, ಸವಿತಾ ಭೂರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net