ಮಕ್ಕಳ ಪ್ರತಿಭೆ ಗುರುತಿಸುವುದು ಅಗತ್ಯ

30HDK3
Published on

ಎಚ್.ಡಿ. ಕೋಟೆ: ತಾಲೂಕಿನ ಮಾದಾಪುರ ಗ್ರಾಮದ ಚಂದ್ರಮೌಳೇಶ್ವರ ಮಲ್ಲಿಕಾರ್ಜುನಸ್ವಾಮಿ ಮಹಾವಿದ್ಯಾಸಂಸ್ಥೆಯಲ್ಲಿ ಮಾದಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಬುಧವಾರ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಾರಯ್ಯ, ಮಕ್ಕಳ ಪ್ರತಿಭೆಗಳನ್ನು ಚಿಕ್ಕಂದಿನಲ್ಲಿಯೇ ಗುರುತಿಸಿ ಪೋಷಿಸಲು ಅನುವು ಮಾಡಿಕೊಡುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿ. ಮಕ್ಕಳಲ್ಲಿರುವ ಪ್ರತಿಭೆಯನ್ನು ಶಿಕ್ಷಣದ ಜತೆಗೆ ಗುರುತಿಸುವ ಕಾರ್ಯ ಶಿಕ್ಷಕರದ್ದು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮಾದಾಪುರ ಗ್ರಾ.ಪಂ. ಅಧ್ಯಕ್ಷ ಮಹೇಶ್ ನಾಯಕ, ಹೈರಿಗೆ ಗ್ರಾ.ಪಂ. ಅಧ್ಯಕ್ಷೆ ಜಯ, ಪಿಎಸಿಸಿಎಸ್ ಅಧ್ಯಕ್ಷ ಕೆ.ಮಹೇಶ್, ಸದಸ್ಯರಾದ ಬಿ.ವಿ.ಬಸವರಾಜು, ಪಿ.ಮಹೇಶ, ಗ್ರಾ.ಪಂ. ಸದಸ್ಯರಾದ ಗಿರೀಶ್, ಮಣಿಕುಮಾರ್, ಪಿಎಲ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಂ.ಡಿ.ಮಂಚಯ್ಯ, ಉಪಾಧ್ಯಕ್ಷ ಶ್ರೀಧರ್, ಸಿಆರ್‌ಪಿ ಪ್ರತಿಭಾರಾಣಿ, ಶಿಕ್ಷಣ ಇಲಾಖೆಯ ಸಿಬ್ಬಂದಿ ಕೃಷ್ಣಮೂರ್ತಿ, ಪುರುಷೋತ್ತಮ, ಗಿರೀಶ್ ಮೂರ್ತಿ, ಮಹದೇವಯ್ಯ, ರಾಮೇಗೌಡ, ಮಾದಾಪುರ ಕ್ಲಸ್ಟರ್ ಶಾಲೆಗಳ ಮುಖ್ಯಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net