

ಹುಲಸೂರು: ಮಕ್ಕಳಲ್ಲಿರುವ ಪ್ರತಿಭೆಗಳು ಹೊರ ಬರತರಲು ಪ್ರತಿಭಾ ಕಾರಂಜಿಯAಥಹ ಕಾರ್ಯಕ್ರಮ ಅವಶ್ಯ ಎಂದು ಭಾಲ್ಕಿ ದೈಹಿಕ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ್ ಹೇಳಿದರು.
ಗುಂಜರಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಳವಾಯಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಭಾ ಕಾರಂಜಿಯಿಂದ ಮಕ್ಕಳ ಪ್ರತಿಭೆ ಗುರುತಿಸಲು ಸಾಧ್ಯ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಿಕ್ಷಕರು ಪ್ರಾಮಾಣಿಕ ಫಲಿತಾಂಶ ನೀಡಬೇಕು ಎಂದರು.
ಜನಪದ ಗೀತೆ, ಭಾವಗೀತೆ, ಭಕ್ತಿ ಗೀತೆ, ಸಮೂಹ ನೃತ್ಯ, ಕೋಲಾಟ, ಜನಪದ ನೃತ್ಯ, ಯೋಗಾಸನ ಮುಂತಾದ ಸ್ಪರ್ಧೆ ನಡೆದವು.
ವಿಜಯಕುಮಾರ ಜೋಗಿರೆ, ದತ್ತಾ ಸಾಬನೆ, ರಾಜೇಶ ಪಾಟೀಲ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುನಿತಾ ಲಾಡೆ, ಪಿಡಿಒ ದೊಂಡಿಬಾ ಬಾಮನೆ, ಅನುಸೂಯಾ ದೇವಣೆ, ಮಹೇಂದ್ರ ಮಾನಕರಿ, ಪ್ರಕಾಶ ಸ್ವಾಮಿ, ಜಾಲಿಂದರ್, ಸಮೀರ ಶೇಖ್, ಮಹಾದೇವ ಸೂರ್ಯವಂಶಿ, ದಿಗಂಬರ ತೇಲಂಗ, ರತ್ನದೀಪ ಹುಲಸೂರೆ, ನಾಗೇಶ ನವಾಡೆ, ರಾಜು, ಶ್ರೀಮಂತ ಗಣೇಶವಾಡೆ, ಕಮಲಾಕರ ನಿಡವಂಚೆ, ಸುಧಾಕರ ಸೂರ್ಯವಂಶಿ, ಸತ್ಯವಾನ ಕಾಂಬಳೆ ಇತರರಿದ್ದರು.