ಮಕ್ಕಳ ಪ್ರತಿಭೆ ಗುರುತಿಸಲು ಮೇಳ ಸಹಕಾರಿ

02
Published on

ಸುರಪುರ : ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಇಂತಹ ಮೇಳಗಳು ಸಹಕಾರಿಯಾಗಿವೆ ಎಂದು ಶಿಕ್ಷಣ ಸಂಯೋಜಕ ಶಿವಪುತ್ರ ಹೇಳಿದರು.
ನಗರದ ಮೇದಾರಗಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ, ಸಾರಕ್ಷರತಾ ಇಲಾಖೆ ಹಾಗೂ ಅಜೀಮ್ ಪ್ರೇಮ್‌ಜೀ ಫೌಂಡೇಷನ್‌ನಿAದ ಬುಧವಾರ ಹಮ್ಮಿಕೊಂಡ ಮಕ್ಕಳ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ಭಾಷಾ ಕೌಶಲ ಬೆಳೆಸಿಕೊಳ್ಳಲು ಇದು ಪೂರಕವಾಗಿದೆ. ಅಲ್ಲದೆ ಇಂತಹ ಪ್ರಯೋಗದಿಂದ ಮಕ್ಕಳಲ್ಲಿ ಪ್ರಶ್ನಿಸುವ ಮತ್ತು ಯೋಚಿಸಿ ಉತ್ತರ ನೀಡುವ ಧೈರ್ಯ ಬರುತ್ತದೆ ಎಂದರು.

ಎಜಿಎಫ್ ಸಂಪನ್ಮೂಲ ವ್ಯಕ್ತಿ ಅನ್ವರ್ ಜಮಾದಾರ ಮಾತನಾಡಿ, ಮಕ್ಕಳ ಜ್ಞಾನವೃದ್ಧಿಗೆ ಮೇಳಗಳು ಸಹಕಾರಿಯಾಗಿವೆ. ಈ ಮೇಳದಲ್ಲಿ ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದಂತೆ ಅನೇಕ ಚಟುವಟಿಕೆ ಮಾಡಲಾಗಿದೆ. ಶಾಲಾ ಹಂತದಲ್ಲಿಯೇ ಶಿಕ್ಷಕರು ಶೈಕ್ಷಣಿಕ ಮೇಳ ಆಯೋಜಿಸುವುದರಿಂದ ಮಕ್ಕಳ ಕಲಿಕೆಗೆ ಇದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಮುಖ್ಯಶಿಕ್ಷಕ ಮೌನೇಶ ಪತ್ತಾರ, ಸಿಆರ್‌ಪಿ ಶಿವಕುಮಾರ ಕಮತಗಿ, ಶಿಕ್ಷಕರಾದ ನಿರ್ಮಲಾ ಗಡಗಡೆ, ಭಾಗಮ್ಮ, ಶಾಂತಮ್ಮ, ಸಾವಿತ್ರಿ, ಶಿವಕುಮಾರ ಹಿರೇಮಠ, ಎಜಿಎಫ್‌ನ ಅನಿಲ್, ವಿನೋದಕುಮಾರ, ಪರಮಣ್ಣ ತೆಳಗೇರಿ, ರಾಜಶೇಖರ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net